

ಕಲಬುರಗಿ: ಭಾರತೀಯ ಸ್ವಾತಂತ್ರö್ಯ ಚಳವಳಿಗೆ ಬಿರ್ಸಾ ಮುಂಡಾ ಕೊಡುಗೆ ಅಪಾರ ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಮಾನವಶಾಸ್ತö್ರ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಶಿವಪ್ರಸಾದ್ ಹೇಳಿದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಾಗವಾನ್ ಬಿರ್ಸಾ ಮುಂಡಾ ಅವರ ೧೫೦ನೇ ಜನ್ಮದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಿದ್ದ ಜನಜಾತಿಯ ಗೌರವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿರ್ಸಾ ಮುಂಡಾ ಜಾರ್ಖಂಡ್‌ನ ಮುಂಡಾ ಬುಡಕಟ್ಟು ಸಮುದಾಯಗಳ ಮಹಾನ್ ನಾಯಕ. ಅವರು ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಬುಡಕಟ್ಟು ಸಮುದಾಯ ಒಗ್ಗೂಡಿಸಿ ಹೋರಾಟ ಮಾಡಿದರು. ಬ್ರಿಟಿಷರು ಬುಡಕಟ್ಟು ಪ್ರದೇಶಗಳ ಸಂಪದ್ಭರಿತ ಸಂಪನ್ಮೂಲಗಳಿAದ ಆಕರ್ಷಿತರಾದರು. ಜಮೀನುದಾರಿ ಪದ್ಧತಿ, ಹಣದ ರೂಪದಲ್ಲಿ ತೆರಿಗೆ ಸಂಗ್ರಹ, ಖನಿಜ ಸಂಪನ್ಮೂಲಗಳ ಗಣಿಗಾರಿಕೆ, ಮುಖ್ಯವಾಹಿನಿಯ ಕಾನೂನು ವ್ಯವಸ್ಥೆ ಪರಿಚಯಿಸುವ ಮೂಲಕ ಬ್ರಿಟಿಷರು ಹೊರಗಿನವರನ್ನು ಬುಡಕಟ್ಟು ಪ್ರದೇಶಗಳಿಗೆ ಕರೆತಂದರು. ಬುಡಕಟ್ಟು ಜನರು ತಮ್ಮ ಸ್ವಂತ ನೆಲದಲ್ಲಿ ಹೊರಗಿನವರನ್ನಾಗಿ ಮಾಡಿದರು ಎಂದರು.
ಬ್ರಿಟಿಷರ ಮತ್ತು ಜಮೀನುದಾರರ ಬುಡಕಟ್ಟು ಸಮುದಾಯಗಳ ಶೋಷಣೆಯನ್ನು ಚಿಕ್ಕ ಹುಡುಗ ಬಿರ್ಸಾ ಮುಂಡಾ ಕಣ್ಣಾರೆ ಕಂಡರು. ಬ್ರಿಟಿಷರು ಮತ್ತು ಜಮೀನುದಾರರ ಶೋಷಣೆಯ ಬಗ್ಗೆ ಬುಡಕಟ್ಟು ಜನಾಂಗದವರಲ್ಲಿ ಅರಿವು ಮೂಡಿಸಿದರು. ಬ್ರಿಟೀಷರ ವಿರುದ್ಧ ಹೋರಾಡಲು ಅವರನ್ನು ಸಜ್ಜುಗೊಳಿಸಿದರು. ಬಿರ್ಸಾ ಮುಂಡಾ ಹೋರಾಟದಿಂದಾಗಿ ಬ್ರಿಟೀಷರು ಭೂ ಹಿಡುವಳಿ ಮತ್ತು ಬುಡಕಟ್ಟು ಹಕ್ಕುಗಳಲ್ಲಿ ಅನೇಕ ಸುಧಾರಣೆ ತರಬೇಕಾಯಿತು. ಅವರನ್ನು ಬ್ರಿಟೀಷರು ಬಂಧಿಸಿದರು. ೨೫ನೇ ವಯಸ್ಸಿನಲ್ಲಿ ಬ್ರಿಟೀಷರ ವಶದಲ್ಲಿ ನಿಧನರಾದರು. ಆದರೆ ಭಾರತದಲ್ಲಿ ಬುಡಕಟ್ಟು ಸಮುದಾಯಗಳ ನಾಯಕರಾಗಿ ಹೊರಹೊಮ್ಮಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ನಾಡಿನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿ ತಿಳಿದುಕೊಳ್ಳಬೇಕು. ಸ್ವಾತಂತ್ರö್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿಯೇ ಗುಲಾಮರಾಗಿದ್ದೆವು. ನಮ್ಮ ಪೂರ್ವಜರು ಮಾಡಿದ ತ್ಯಾಗದಿಂದ ಇಂದು ನಾವು ಸ್ವಾತಂತ್ರÈ ಅನುಭವಿಸುತ್ತಿz್ದೆÃವೆ ಎಂದರು.
ಪ್ರಭಾರಿ ಕುಲಸಚಿವ ಪ್ರೊ.ಚನ್ನವೀರ ಆರ್.ಎಂ ಮಾತನಾಡಿದರು. ಬಾಗವಾನ್ ಬಿರ್ಸಾ ಮುಂಡಾ ೧೫೦ನೇ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಸಂಯೋಜಕ ಡಾ.ಡಿ.ಗೌತಮ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ರಾ?À್ಟö್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು. ಪ್ರೊ.ವಿಜಯಕುಮಾರ್, ಪ್ರೊ.ಪಾಂಡುರAಗ ಪತ್ತಿ, ಡಾ.ಜೊಹೇರ್, ಡಾ.ಲಿಂಗದೇವರು, ಪ್ರೊ.ದೇವರಾಜ್ ಸೇರಿದಂತೆ ಎಲ್ಲಾ ಡೀನ್‌ಗಳು, ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.