ತರಿ ಭೂಮಿ ದಿನದ ಅಂಗವಾಗಿ ಪಕ್ಷಿ ವೀಕ್ಷಣೆ ಕಾರ್ಯಾಗಾರ

Vet-Land-Day-inauguration
Published on

ಕಾರವಾರ: ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ಇಕೋ ಸಿಸ್ಟಂ ಘಟಕ, ಕವಿವಿ ಸಾಗರ ಅಧ್ಯಯನ ಸಂಸ್ಥೆ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಿAದ ವಿಶ್ವ ತರಿಭೂಮಿಯ ದಿನದ ಅಂಗವಾಗಿ ಶುಕ್ರವಾರ ಇಲ್ಲಿನ ಸದಾಶಿವಗಡ ಕಣಸಗಿರಿ ಭಾಗದಲ್ಲಿ ಪಕ್ಷಿ ವೀಕ್ಷಣೆ ಆಯೋಜಿಸಲಾಗಿತ್ತು.
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಮತ್ತು ಪಾಲಿಟೆಕ್ನಿಕ್ ಕಾಲೇಜ್‌ಗಳ ಸುಮಾರು 50 ವಿದ್ಯಾರ್ಥಿಗಳು ಪಾಲ್ಗೊಂಡು 28 ಪ್ರಭೇದದ ಪಕ್ಷಿಗಳನ್ನು ಗುರುತಿಸಿದರು.
ಡಿಎಫ್‌ಒ ಸಿ.ರವಿಶಂಕರ ಅವರು ಕಾಂಡ್ಲಾ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಅವರು ತೇವಭೂಮಿ ದಿನಾಚರಣೆಯ ಮಹತ್ವ ಮತ್ತು ಅದರ ಉದ್ದೇಶದ ಕುರಿತು ಮಾತನಾಡಿದರು. ಆರ್‌ಎಫ್‌ಒ ರಾಘವೇಂದ್ರ ಬಿ.ಸ್ವಾಗತಿಸಿದರು. ಡಿಆರ್‌ಎಫ್‌ಒ ಚಂದ್ರಶೇಖರ್ ಕಟ್ಟಿಮನಿ
ಶ್ರೀ ಹರೀಶ್ ಕೆ. ವೈಜ್ಞಾನಿಕ ಅಧಿಕಾರಿಗಳು ಎನ್.ಪಿ.ಸಿ.ಐ.ಎಲ್ ಕೈಗಾ ಮತ್ತು ಅವರ ತಂಡ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸ್ಥಳಿಯ ಹಾಗೂ ವಲಸೆ ಹಕ್ಕಿಗಳ ಗುರುತಿಸುವಿಕೆ ಮತ್ತು ಅವುಗಳ ಆವಾಸಸ್ಥಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಒಟ್ಟು 28 ವಿವಿಧ ಜಾತಿಯ ಪಕ್ಷಿಗಳನ್ನು ಗುರುತಿಸಲಾಯಿತು.
ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರವಾರದ ವಿದ್ಯಾರ್ಥಿಗಳು, ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆ, ಕೋಡಿಬಾಗ ಕಾರವಾರದ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಹಾಗೂ ವಿಜ್ಙಾನ ಕೇಂದ್ರದ ಸಿಬ್ಬಂದಿಗಳು ಸೇರಿ ಒಟ್ಟು 50 ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net