ನನ್ ಕೋಳಿ ಕೊಡಲ್ಲ. ನಿಮ್ ಕೈ ಮುಗೀತೀನಿ ಬಿಟ್ಬಿಡಿ..!: ಮೈಸೂರಿನಲ್ಲಿ ಮಹಿಳೆಯ ಅಳಲು..

Cock 19 MAR 20
Published on

ಮೈಸೂರು: ನನ್ ಕೋಳಿ ಕೊಡಲ್ಲ. ನಿಮ್​ ಕೈ ಮುಗೀತೀನಿ. ಬಿಟ್ಬಿಡಿ.. ನಾನಿಲ್ಲಿ ಇಟ್ಕೊಳ್ಳಲ್ಲ. ಮಗಾ ಚೀಲ ತಗೊಂಬಾ.. ಕೊಟ್​ ಕಳುಹಿಸಿಬಿಡ್ತೀನಿ..

ಇದು, ಕೋಳಿ ಹಿಡ್ಕೊಂಡು ಹೋಗುವುದಕ್ಕೆ ಬಂದ ಪಾಲಿಕೆ ಸಿಬ್ಬಂದಿ ಬಳಿ ಮಹಿಳೆಯೊಬ್ಬರು ಗೋಳಾಡಿದ ರೀತಿ. ಕರೊನಾ ವೈರಸ್ ಸೋಂಕಿನ ಭೀತಿ ನಾಡನ್ನು ಆವರಿಸಿರುವಾಗಲೇ ಮೈಸೂರು ಮತ್ತು ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಭೀತಿಯೂ ಕಾಡಿದೆ. ಹೀಗಾಗಿ ಕೋಳಿಗಳನ್ನು ಹತ್ಯೆ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಕೇರಳದಲ್ಲೂ ಇಂಥ ಭೀತಿ ಕಾಡಿದ್ದು ಅಲ್ಲೂ ಕೋಳಿಗಳನ್ನು ಸಾಮೂಹಿಕವಾಗಿ ನಾಶಮಾಡಲಾಗುತ್ತಿದೆ.

ಮೈಸೂರಿನಲ್ಲಿ ಕಲ್ಲಿಂಗ್ ಆಪರೇಷನ್ ವೇಳೆ ಕಂಡುಬಂದ ದೃಶ್ಯ ನಮ್ಮ ದಿಗ್ವಿಜಯ ನ್ಯೂಸ್​ ಚಾನೆಲ್​ನಲ್ಲಿ ಪ್ರಸಾರವಾಗಿದ್ದು ವೀಕ್ಷಣೆಗಾಗಿ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net