More

    ಕರೊನಾ ವೈರಸ್ ನ್ಯೂಸ್​ ನೋಡ್ತಾ ಇದ್ದ ಚೀನೀಯನಿಗೆ 30 ವರ್ಷ ಬಳಿಕ ನೆನಪು ಮರುಕಳಿಸಿದ್ದು ನೋಡಿ ಎಲ್ಲರಿಗೂ ಶಾಕ್​! : ಸಿನಿಮಾದಂತಿದೆ ಆ ಬದುಕು…

    ಬೀಜಿಂಗ್​: ಚೀನಾಮೂಲದ ಕರೊನಾ ವೈರಸ್ Covid19 ಜಾಗತಿಕ ತಲ್ಲಣ ಉಂಟುಮಾಡಿದರೆ, ಚೀನೀಯನೊಬ್ಬನ ನೆನಪು ಮರುಕಳಿಸುವುದಕ್ಕೂ ಕಾರಣವಾಗಿದೆ ಅಂದರೆ ನಂಬ್ತೀರಾ! ನಂಬಲೇ ಬೇಕು. ಬರೋಬ್ಬರಿ 30 ವರ್ಷಗಳ ಹಿಂದೆ ನೆನಪಿನ ಶಕ್ತಿ ಕಳೆದುಕೊಂಡಿದ್ದ ಚೀನೀಯನಿಗೆ ಕರೊನಾ ವೈರಸ್ ಕುರಿತ ಸುದ್ದಿ ನೋಡ್ತಾ ಇದ್ದಂತೆ ಮನೆಯ ನೆನಪು ಮರುಕಳಿಸಿದ್ದು ನೋಡಿ ಆತನ ಒಡನಾಡಿಗಳಿಗೆಲ್ಲ ಶಾಕ್​!

    ಆತ ಚೀನಾದ ವಲಸೆ ಕಾರ್ಮಿಕ. ಹೆಸರು ಝು ಜಿಯಾಮಿಂಗ್​. ಚೀನಾದ ಗುಯಿಝೌ ಪ್ರಾಂತ್ಯದವನು. 30 ವರ್ಷಕ್ಕೂ ಹಿಂದೆ ಹುಟ್ಟೂರು ಬಿಟ್ಟು ಹುಬೈಗೆ ನಿರ್ಮಾಣ ಕಾಮಗಾರಿ ಕೆಲಸಕ್ಕೆಂದು ವಲಸೆ ಬಂದವನು. ಬಂದ ಮರುವರ್ಷವೇ 1990ರಲ್ಲಿ ಕೆಲಸ ಮಾಡುತ್ತಿರುವಾಗ ಅಪಘಾತಕ್ಕೆ ಈಡಾಗಿ ಮಿದುಳಿಗೆ ಏಟಾಗಿತ್ತು. ಅಂದು ಆತನ ಕಳೆದುಕೊಂಡದ್ದು ಗುರುತಿನ ಚೀಟಿಯಷ್ಟೇ ಅಲ್ಲ, ನೆನಪನ್ನು ಕೂಡ. ಎಲ್ಲವನ್ನು ಕಳೆದುಕೊಂಡ ಝು ಬೀದಿ ಬೀದಿ ಅಲೆಯ ತೊಡಗಿದ. ಅವರು ಇವರು ಹೇಳಿದ ಕೆಲಸ ಮಾಡಿಕೊಡುತ್ತಿದ್ದ.

    ಆತನ ಕೆಲಸ ಗಮನಿಸಿದ ಅಲ್ಲಿನ ದಯಾಳು ದಂಪತಿ ತಮ್ಮ ಮನೆಯಲ್ಲಿರಲು ಜಾಗ ಮಾಡಿಕೊಟ್ಟರು. ಅವರು ಆತನ ಹಳೆಯ ಬದುಕು, ಹೆಸರು ತಿಳಿಯಲು ಪ್ರಯತ್ನಿಸಿದರು. ಏನೇ ಪ್ರಯತ್ನ ಮಾಡಿದರೂ ನೆನಪು ಮರುಕಳಿಸಿಯೇ ಇರಲಿಲ್ಲ.

    ಹುಬೈನ ಈ ದಂಪತಿ 2015ರಲ್ಲಿ ತಮ್ಮ ಹುಟ್ಟೂರಿಗೆ ಮರಳಲು ನಿರ್ಧರಿಸುತ್ತಾರೆ. ಆಗ, ಝು ಜಯಾಮಿಂಗ್ ಗೂ ತಮ್ಮ ಜತೆಗೆ ಝೇಜಿಯಾಂಗ್​ ಪ್ರಾಂಥ್ಯದ ಯೂನ್ಹೆಗೆ ಬರುವಂತೆ ಸೂಚಿಸುತ್ತಾರೆ. ಅದಕ್ಕೆ ಒಪ್ಪಿದ ಆತ, ಅಲ್ಲಿಗೆ ತೆರಳಿದ್ದ. ಆ ಪ್ರಯಾಣ ಆತನ ನೆನಪಿ ಶಕ್ತಿಯ ಮೇಲೆ ಒಂದಷ್ಟು ಪರಿಣಾಮ ಬೀರಿತು. ಯೂನ್ಹೆಗೆ ತಲುಪುತ್ತಿದ್ದಂತೆ ಅಪಘಾತ ಸಂದರ್ಭದ ಕೆಲವು ಘಟನೆಗಳೆಲ್ಲ ನೆನಪಿಗೆ ಬರತೊಡಗಿದವು.

    ಕಳೆದ ತಿಂಗಳು ಕರೊನಾ ವೈರಸ್ Covid19 ಸೋಂಕಿಗೆ ಸಂಬಂಧಿಸಿದ ಸುದ್ದಿಯನ್ನು ನೋಡುತ್ತಿರುವಾಗಲೇ ತನ್ನ ಹುಟ್ಟೂರಿನ ನೆನಪು ಝು ಜಯಾಮಿಂಗ್ ಗೆ ಆಯಿತು. ಕೂಡಲೇ ನಿಧಿ ಸಿಕ್ಕಷ್ಟು ಖುಷಿಯಿಂದ ಅರಚಿದ. ಎಲ್ಲವನ್ನೂ ತನಗೆ ಆಶ್ರಯ ನೀಡಿದ್ದ ದಂಪತಿಗೆ ಹೇಳಿದ. ಪೊಲೀಸರ ನೆರವು ಕೋರಿದ ಅವರು, 1,500 ಕಿ.ಮೀ ದೂರದಲ್ಲಿರುವ ಗುಯಿಝೌ ಪ್ರಾಂತ್ಯದ ಅಧಿಕಾರಿಗಳನ್ನು ಸಂಪರ್ಕಿಸಿದರು. ನಂತರ ನಡೆದುದೆಲ್ಲವೂ ಹೃದಯ ಸ್ಪರ್ಶಿಯಾದ ಒಗ್ಗೂಡುವಿಕೆ.

    ಈ 30 ಅವಧಿಯಲ್ಲಿ ಅಂದರೆ, 18 ವರ್ಷ ಹಿಂದೆ ಝು ಜಯಾಮಿಂಗ್ ನ ತಂದೆ ತೀರಿಕೊಂಡಿದ್ದರು. ನಾಪತ್ತೆ ಎಂಬ ಕಾರಣಕ್ಕೆ ಝು ಜಯಾಮಿಂಗ್ ನ ರೆಸಿಡೆನ್ಸಿ ಗುರುತಿನ ಚೀಟಿ ರದ್ದಾಗಿತ್ತು. ಆದಾಗ್ಯೂ, ತನ್ನ ತಾಯಿ ಮತ್ತು ನಾಲ್ಕು ಒಡಹುಟ್ಟುಗಳ ಜತೆಗೆ ಮರುಸಂಪರ್ಕ ಏರ್ಪಟ್ಟಿತು. 83 ವರ್ಷದ ತಾಯಿಯ ಜತೆಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದೂ ಆಗಿದೆ. ಈ ಎಲ್ಲ ಸಂತಸ ಸಂಭ್ರಮವನ್ನು ಆತ ಈಗ ಎಲ್ಲರೊಡನೆ ಹಂಚಿಕೊಳ್ಳುತ್ತಿದ್ದಾನೆ. ಹಾಗೆ ಕರೊನಾ ವೈರಸ್​ ಝು ಜಯಾಮಿಂಗ್ ಎಂಬ ಚೀನೀಯನ ಪಾಲಿಗೆ ಒಳಿತನ್ನೇ ಮಾಡಿತು!!! (ಏಜೆನ್ಸೀಸ್)

    ಸೋಪ್ ಬಹಳ ಚೆನ್ನಾಗಿದೆ ಎಂದು ಆ ಮಹಿಳೆ ಹಲವು ದಿನ ಕೈ ತೊಳೆದದ್ದೇ ತೊಳೆದದ್ದು.. ಕೊನೆಗೂ ಸತ್ಯ ಅರಿವಾಗಿ ಬೇಸ್ತು ಬಿದ್ದಳಾಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts