ರಾಷ್ಟ್ರದ ಅಭಿವೃದ್ಧಿಯಲ್ಲಿ ಜೈವಿಕ ಇಂಧನದ ನಿರ್ಣಾಯಕ ಪಾತ್ರ

Bio_Diesel
Published on

ತುಮಕೂರು: ಮುಂದಿನ ದಿನಗಳಲ್ಲಿ ಜೈವಿಕ ಇಂಧನಗಳೇ ರಾಷ್ಟ್ರದ, ರಾಜ್ಯದ ಅಭಿವೃದ್ಧಿಯಲ್ಲಿ ನಿರ್ಣಾಯಕ ವಾಗಲಿದ್ದು ರಾಜ್ಯದಲ್ಲಿ 34 ಜೈವಿಕ ಇಂಧನ ಸಂಶೋಧನಾ ಕೇಂದ್ರಗಳು ಚಾಲನೆಯಲ್ಲಿವೆ ಎಂದು ರಾಜ್ಯ ಜೈವಿಕ ಇಂದನ ಮಂಡಳಿ ಅಧ್ಯಕ್ಷ ಎಸ್​.ಇ.ಸುಧೀಂದ್ರ ಹೇಳಿದರು.

ನಗರದ ಎಸ್​ಐಟಿ ಕಾಲೇಜು ಮಾಧ್ಯಮ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂದನ ಅಭಿವೃದ್ಧಿ ಮಂಡಳಿ ,ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಎಸ್​ಐಟಿ ಸಹಯೋಗದಲ್ಲಿ ಗುರುವಾರ ಜೈವಿಕ ಇಂದನ ಸಂಶೋಧನೆ, ಮಾಹಿತಿ ಮತ್ತು ಕೇಂದ್ರದ ಸಂಯೋಜಕರು ಮತ್ತು ಯೋಜನಾ ಸಿಬ್ಬಂದಿಯವರಿಗೆ ಹಮ್ಮಿಕೊಂಡಿದ್ದ ಜೈವಿಕ ಇಂಧನ ತಂತ್ರಜ್ಞಾನ ಕುರಿತ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಸಾಲಿನ ರಾಷ್ಟ್ರೀಯ ಆಯವ್ಯಯ ಅಂದಾಜು 50 ಲಕ್ಷ ಕೋಟಿ ರೂ.ಗಳಿದ್ದು, ಅದರಲ್ಲಿ ಸುಮಾರು 17ಲಕ್ಷ ಕೋಟಿ ರೂ. ಇಂಧನ ಆಮದಿಗೆ ವ್ಯಯವಾಗಲಿದ್ದು, ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಜೈವಿಕ ಇಂಧನ ಕ್ಷೇತ್ರ ಕೊಡುಗೆಯನ್ನು ನೀಡುತ್ತಿದೆ ಎಂದರು.

ಕರ್ನಾಟಕ ಮೊಟ್ಟಮೊದಲ ಜೈವಿಕ ಇಂಧನ ನೀತಿ ರೂಪಿಸಿದ ರಾಜ್ಯವಾಗಿದ್ದು ಮುಂದೆಯೂ ಉದ್ದೇಶತ ಜೈವಿಕ ಇಂಧನ ಕ್ಷೇತ್ರದ ಉನ್ನತಿಕರಣ ಹಾಗೂ ವಾಣಿಜ್ಯೀಕರಣದಲ್ಲಿಯೂ ಹಲವಾರು ಕಾರ್ಯಯೋಜನೆಗಳ ರೂಪಿಸುವತ್ತ ಚಿಂತನೆ ನಡೆದಿದ್ದು ಅನುಷ್ಠಾನವನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲು ಪ್ರಯತ್ನಿಸುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದು,ತಾಂತ್ರಿಕ ಸಂಸ್ಥೆಗಳ, ತಂತ್ರಜ್ಞಾನ ಸಹಕಾರವನ್ನು ತಮ್ಮಿಂದ ಇಚ್ಚಿಸಿದ್ದು ತಾವುಗಳೆಲ್ಲರೂ ಈ ಮಂಥನ ಕಾರ್ಯದಲ್ಲಿ ಜೊತೆಯಾಗುವವಿರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚೆಗೆ ಮೈಸೂರಿನಲ್ಲಿ ಜರುಗಿದ ಅಂತರಾಷ್ಟ್ರೀಯ ಸಮ್ಮೇಳನ, ರಾಜಧಾನಿಯಲ್ಲಿ ಜರುಗಿದೆ, ಇನ್ವೆಸ್ಟ್​ ಕರ್ನಾಟಕ -2025 ,ಹೂಡಿಕೆದಾರರ ಸಮಾವೇಶ ಗಳಲ್ಲಿ ಮಂಡಳಿಯ ಉದ್ದೇಶಿತ ವಿಕಸನ ಕಾರ್ಯ ಯೋಜನೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಗಿದ್ದು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿದ್ದಾರೆ.ಮಂಡಳಿಯ ಅಧ್ಯಕ್ಷನಾಗಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ರಾಜ್ಯಗಳಿಗೆ, ಬೇರೆ ರಾಷ್ಟ್ರಗಳಿಗೆ ಭೇಟಿಕೊಟ್ಟು ಅಲ್ಲಿನ ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿರುವ ವಿಚಾರ ತಿಳಿಸಿದರು.

ರಾಜ್ಯ ವಿಜ್ಞಾನ, ತಂತ್ರಜ್ಞಾನ ಮಂಡಳಿಯ ಡಾ.ಯು.ಟಿ.ವಿಜಯ್​ ಮಾತನಾಡಿ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಭಿವೃದ್ದಿ ಮಂಡಳಿ ಆರಂಬವಾಗಿ ಐವತ್ತು ವರ್ಷಗಳು ಪೂರೈಸಿದ್ದು, ಸರ್ಕಾರದ ಸಹಭಾಗಿತ್ವದಲ್ಲಿ ಪರ್ಯಾಯ ಇಂದನಗಳ ಸಂಶೋಧನೆ, ಮಳೆ ನೀರು ಕೊಯ್ಲು, ಅಂತರಜಲ ವೃದ್ದಿ,ನೀರಿನ ಸಂರಕ್ಷಣೆಯಲ್ಲಿ ತೊಡಗಿದೆ. ಇಂಜಿನಿಯರಿಂಗ್​ ಕಾಲೇಜುಗಳಲ್ಲಿ ಜೈವಿಕ ಇಂದನ ವಿಭಾಗಗಳನ್ನು ತೆರೆದು ಯುವಜನರಿಗೆ ಅಗತ್ಯ ಮಾಹಿತಿ ಮತ್ತು ಸಂಶೋಧನೆಗೆ ಒತ್ತು ನೀಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಸ್​.ಶಿವಶಂಕರ್​ ಮಾತನಾಡಿ, ವಾಯುಗುಣದಲ್ಲಿರುವ ಕಾರ್ಬನ್​ ಡೈಯಾಕ್ಸೇಡ್​ನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವದ್ಯಾಂತ ಜೈವಿಕ ಇಂಧನ ಉತ್ಪಾಧನೆಗೆ ಹೆಚ್ಚು ಒತ್ತು ನೀಡಲಾಗಿದೆ.ಹೊಂಗೆ, ಬೇವು, ಸಿಮರೂಬ್​,ಜಟ್ರೋಪ,ಬಸಳಿ ಎಸೆಯಲ್ಪಡುವ ಅಡುಗೆ ಎಣ್ಣೆ ಇನ್ನಿತರ ಮೂಲಗಳಿಂದ ಜೈವಿಕ ಇಂಧನ ಸಂಶೋಧನೆ ಹೆಚ್ಚಿನ ರೀತಿಯಲ್ಲಿ ನಡೆದಿದೆ ಆದರೂ ಒಟ್ಟಾರೆ ಬಳಕೆಗೆ ಶೇ.5ರಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಎಸ್​ಐಟಿ ಸಿಇಒ ಡಾ.ಶಿವಕುಮಾರಯ್ಯ ಮಾತನಾಡಿ, ರಾಜ್ಯ ಸರ್ಕಾರ 2009ರಲ್ಲಿ ಜೈವಿಕ ಇಂದನ ನಿಯಮ ಜಾರಿಗೆ ತಂದ ನಂತರ ಕ ಕೊಯಮತ್ತೂರಿಗೆ ಹೋಗಿ ಅಲ್ಲಿನ ಜೈವಿಕ ಇಂಧನ ಉತ್ಪಾಧನಾ ಘಟಕಗಳನ್ನು ಅಧ್ಯಯನ ಮಾಡಿ 2011ರಲ್ಲಿ ಎಸ್​.ಐ.ಟಿಯಲ್ಲಿ ಜೈವಿಕ ಇಂಧನ ಉತ್ಪಾಧನಾ ಮತ್ತು ಮಾಹಿತಿ ಕೇಂದ್ರ ತರೆದು, ಇಲ್ಲಿ ಉತ್ಪಾದನೆಯಾಗುವ ಬಯೋ ಡಿಸೇಲ್​ ಬಳಸಿ ನಮ್ಮ ಸಂಸ್ಥೆಯ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಆದರೆ, ಅಗತ್ಯ ಬೀಜಗಳ ಸಂಗ್ರಹ ಕೊರತೆಯಿಂದ ಶೇ.100 ಬಳಕೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಶೋಧನೆ ನಡೆಯಲಿದೆ ಎಂದರು.

ಎಸ್​ಐಟಿ ಪ್ರಾಚಾರ್ಯ ಡಾ.ಎಸ್​ ವಿ ದಿನೇಶ್​, ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಲ್​.ಶಿವಶಂಕರ್​, ಡಿಸಿಎಫ್​ ಬಿ.ಆರ್​.ಲೋಹಿತ್​, ಯೋಜನಾ ಸಲಹೆಗಾರ ಡಾ.ಜಿ.ಎನ್​.ದಯಾನಂದ, ಕೆಎಸ್​ಸಿಎಸ್​ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ.ವಿಜಯ್​, ಮೆಕಾನಿಕಲ್​ ಇಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಡಾ.ಯು.ಎಸ್​ . ಮಲ್ಲಿಕಾರ್ಜುನ್​, ಬಿ ಆರ್​ ಐ ಐ ಡಿಸಿ ಕೇಂದ್ರದ ಸಂಯೋಜಕ ಡಾ. ಓಂಕಾರೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net