ಕುಸಿದು ಬಿದ್ದು ಬಿಲ್ ಕಲೆಕ್ಟರ್ ಸಾವು

21hgr1
ಅಜಯ್
Published on

ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಶುಕ್ರವಾರ ದಿಢೀರ್ ಕುಸಿದು ಬಿದ್ದು ಬಿಲ್ ಕಲೆಕ್ಟರ್ ಅಜಯ್ (34) ಮೃತಪಟ್ಟಿದ್ದಾರೆ. ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಅಜಯ್, ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕರ ವಸೂಲಿ ಮಾಡಿಕೊಂಡು, ಬೆಳಗ್ಗೆ 11:45ರ ಸಮಯದಲ್ಲಿ ಕಚೇರಿಗೆ ಹಿಂದಿರುಗಿದ್ದನು. ಇದ್ದಕ್ಕಿದ್ದಂತೆ ತಲೆ ತಿರುಗಿ ಕುಸಿದಿದ್ದು, ಕಚೇರಿ ಸಿಬ್ಬಂದಿ ತಕ್ಷಣ ಖಾಸಗಿ ವಾಹನದಲ್ಲಿ ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net