

ಕಲಬುರಗಿ ; -ಜೇವರ್ಗಿ ರಸ್ತೆಯಲ್ಲಿರುವ ಕೇಸರಿಬೆಟ್ಟದ ಬಳಿಯಲ್ಲಿ ಬೈಕ್‌ಗಳು ಎರಡು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿವೆ.
ವಿಶ್ವನಾಥ ಎಂಬುವರೇ ಮೃತಪಟ್ಟಿರುವ ಬೈಕ್ ಸವಾರ. ಆಳಂದ ತಾಲೂಕಿನ ಶ್ರೀಶೈಲ ಮತ್ತು ಮಂಜುನಾಥ ಗಾಯಗೊಂಡಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಅಪಘಾತ ಸಂಭವಿಸಿತ್ತು.ಗಾಯಗೊAಡಿದ್ದ ಮೂವರನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ವಿಶ್ವನಾಥ ಬುಧವಾರ ಕೊನೆಯುಸಿರೆಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.