ಅಪಘಾತದಲ್ಲಿ ಬೈಕ್ ಸವಾರ ಸಾವು

ಅಪಘಾತದಲ್ಲಿ ಬೈಕ್ ಸವಾರ ಸಾವು
Published on

ಬನ್ನೂರು: ಬೈಕ್‌ಗೆ ಕಾರುಗಳು ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಕುಳಿತಿದ್ದ ಮಹಿಳೆ ನದಿಗೆ ಹಾರಿ ಬಿದ್ದಿದ್ದಾರೆ.

ಮೈಸೂರಿನ ಮೇಟಗಳ್ಳಿಯ ಬಿಎಂಶ್ರೀನಗರದ ನಿವಾಸಿ ಶಂಕರ್ (30) ಮೃತರು. ಇವರ ತಾಯಿ ಪಾರ್ವತಮ್ಮ (55) ಡಿಕ್ಕಿಯ ರಭಸಕ್ಕೆ 10 ಅಡಿ ಆಳದ ಕಾವೇರಿ ನದಿಗೆ ಹಾರಿ ಬಿದ್ದಿದ್ದು, ನಾಪತ್ತೆಯಾಗಿದ್ದಾರೆ.

ಬನ್ನೂರು ಸಮೀಪದ ಕಾವೇರಿ ನದಿಯ ಸೇತುವೆ ಮೇಲೆ ಸೋಮವಾರ ಮಧ್ಯಾಹ್ನ ಸಾಗುತ್ತಿದ್ದ ಒಂದು ಕಾರಿನ ಟಯರ್ ಸಿಡಿದು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಳವಳ್ಳಿ ಕಡೆಯಿಂದ ತಾಯಿಯೊಂದಿಗೆ ಬರುತ್ತಿದ್ದ ಶಂಕರ್ ಬೈಕ್‌ಗೆ ಕಾರುಗಳು ಡಿಕ್ಕಿ ಹೊಡೆದಿವೆ. ಇದರಿಂದ ಶಂಕರ್ ಸ್ಥಳದಲ್ಲೇ ಮೃತಪಟ್ಟರು. ಕಾರಿಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ.

ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಬನ್ನೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ನದಿಯಲ್ಲಿ ಪಾರ್ವತಮ್ಮ ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net