ಕುದೂರು: ಪಟ್ಟಣದ ಕೆಂಪೇಗೌಡ ಸರ್ಕಲ್ ಶನಿವಾರ ರಾತ್ರಿ ನಿಂತಿದ್ದ ಬೊಲೆರೋ ಗೂಡ್ಸ್ಗೆ ಡಿಕ್ಕಿಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಸಂಭವಿಸಿದೆ.
ಪಟ್ಟಣದ ಲ್ಮದೇವಿನಗರ ನಿವಾಸಿ ಕರಣ್ (20) ಮೃತ ಯುವಕ. ಕೊರಿಯರ್ ಬಾಯ್ ಆಗಿರುವ ಕರಣ್, ಮರೂರಿನ ಗ್ರಾಹಕರೊಬ್ಬರಿಗೆ ಪಾರ್ಸಲ್ ಕೊಟ್ಟು ಬರುವಾಗ ದುರ್ಟನೆ ಸಂಭವಿಸಿದೆ. ತೀವ್ರ ಗಾಯಗೊಂಡ ಯುವಕನನ್ನು ಸ್ಥಳಿಯರು ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಮಾರ್ಗ ಮಧ್ಯದಲ್ಲೆ ಯುವಕ ಕೊನೆಯುಸಿರೆಳೆದಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ಯುವಕನ ಕುಟುಂಬದವರು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.