ಅಪಘಾತದಲ್ಲಿ ಬೈಕ್​ ಸವಾರ ಸಾವು

Published on

ಚಿಂತಾಮಣಿ: ಚಿಂತಾಮಣಿ&ಬೆಂಗಳೂರು ರಸ್ತೆಯ ಜೋಡಿ ಹೊಸಹಳ್ಳಿ ಬಳಿ ಶನಿವಾರ ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಬೈಕ್​ ಸವಾರ ಸ್ಥಳದಲ್ಲಿಯೇ ಮೃತಪಟ್ಟಿಟ್ಟು, ಹಿಂಬದಿ ಸವಾರನ ಕಾಲು ಮುರಿದಿದೆ. ಬೆಂಗಳೂರಿನ ರಾಜಾಜಿನಗರದ ನಿವಾಸಿ ಕೊಲಂಬಸ್​ (27) ಮೃತ. ಬೆಂಗಳೂರಿನ ತಾವರೆಕೆರೆಯ ನಿವಾಸಿ ಭರತೇಶ್​(25) ಗಾಯಾಳು. ಸಾರಿಗೆ ಬಸ್​ ಚಿಂತಾಮಣಿ ಬಸ್​ ನಿಲ್ದಾಣದಿಂದ ಬೆಂಗಳೂರು ಮೂಲಕ ಹಟ್ಟಿಗೆ ತೆರಳುತಿತ್ತು. ಬೈಕ್​ ಸವಾರರಿಬ್ಬರು ಬೆಂಗಳೂರಿನಿಂದ ಚಿಂತಾಮಣಿ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೈವಾರ ಪೊಲೀಸ್​ ಹೊರಠಾಣೆಯ ಎಎಸ್​ಐ ಪ್ರಕಾಶ್​ ಮತ್ತು ಸಿಬ್ಬಂದಿ ಅಪಘಾತ ಸ್ಥಳಕ್ಕೆ ತೆರಳಿ ಮೃತಪಟ್ಟ ವ್ಯಕ್ತಿ ಹಾಗೂ ಗಾಯಾಳುವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ ನಂತರ ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿ ಮುರಳೀಧರ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net