

ರಾಮನಗರ: ಬೈಕ್‌ಗೆ ನಾಯಿ ಅಡ್ಡಬಂದ ಕಾರಣ ನಿಯಂತ್ರಣ ತಪ್ಪಿ ಬೈಕ್‌ಸವಾರ ಕೆಳಗೆ ಬಿದ್ದು ಸಾವಿಗೀಡಾಗಿರುವ ಘಟನೆ ತಾಲೂಕಿನ ಕಲ್ಲುಗೋಪಹಳ್ಳಿ ಗ್ರಾಮದ ಸಮೀಪ ಬೆಂ-ಮೈ ದಶಪಥ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.
ಸುರೇಶ್(28) ಮೃತ ದುದೈರ್ವಿ, ಟಯೋಟ ಕಾರ್ಖಾನೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಈತ, ಶುಕ್ರವಾರ ಕೆಲಸ ಮುಗಿಸಿಕೊಂಡು ರಾತ್ರಿ 8 ಗಂಟೆಯ ಸುಮಾರಿನಲ್ಲಿ ತನ್ನ ಬೈಕ್‌ನಲ್ಲಿ ಬರುತ್ತಿರುವಾಗ ಈತನ ಬೈಕ್‌ಗೆ ನಾಯಿ ಅಡ್ಡಬಂದಿದೆ.
ನಾಯಿ ಅಡ್ಡಬಂದಿದ್ದರಿಂದ ಬೈಕ್‌ಸವಾರ ಆಯತಪ್ಪಿ ಕೆಳಗೆ ಬಿದಿದ್ದಾನೆ, ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ಬಿಡದಿಯ ಭರತ್‌ಕೆಂಪಣ್ಣ ಆಸ್ಪತ್ರೆಗೆ ಈತನನ್ನು ದಾಖಲಿಸಲಾಗಿತ್ತು. ತೀವ್ರಗಾಯಗೊಂಡ ಹಿನ್ನೆಲೆಯಲ್ಲಿ ಸುರೇಶ್ ಶನಿವಾರ ಕೊನೆಯುಸಿರೆಳೆದಿದ್ದಾರೆ. ಈ ಸಂಬಂದ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.