ಅಂಚೆ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಸಾವು

Published on

ಕುದೂರು: ಮರೂರು&ಮಾಗಡಿ ಮುಖ್ಯರಸ್ತೆಯ ತಿಪ್ಪಸಂದ್ರ ಹೋಬಳಿಯ ಶಿವನಸಂದ್ರ ಬಸ್​ ನಿಲ್ದಾಣದ ಬಳಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಅಂಚೆ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾನೆ.

ತಿಪ್ಪಸಂದ್ರ ಹೋಬಳಿಯ ಆರನಕಟ್ಟೆಪಾಳ್ಯದ ರೈತ ವೆಂಕಟೇಶ್​ (56) ಮೃತ. ಹಾಗೂ ಅದೇ ಗ್ರಾಮದ ರೋಹಿತ್​ ಗಾಯಾಳು. ಮಂಗಳವಾರ ಡೇರಿಗೆ ಹಾಲು ಹಾಕಲು ಸ್ವಗ್ರಾಮದಿಂದ ಸಿಂಗ್ರಿಗೌಡನಪಾಳ್ಯಕ್ಕೆ ಹೋಗಿ ವಾಪಸ್​ ಬರುವಾಗ ಮಾಗಡಿ ಕಡೆಯಿಂದ ಬಂದ ಅಂಚೆ ವಾಹನ ಡಿಕ್ಕಿಯಾಗಿದೆ. ಮೃತ ದೇಹವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುದೂರು ಠಾಣೆಯಲ್ಲಿ ಪ್ರಕರಣ ದಾಖಳಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net