

ಸಿಗರೇಟು, ಮದ್ಯ ಮುಂತಾದ ದುರಭ್ಯಾಸಗಳು ಜನರ ಕೈಯಲ್ಲಿ ಏನೆಲ್ಲಾ ಮಾಡಿಸುತ್ತವೆ ಅನ್ನೋದಕ್ಕೆ ಇದೇ ನಿದರ್ಶನ. ಯದ್ವಾ ತದ್ವಾ ಕರೊನಾ ಹರಡಿರುವಾಗ, ಲಾಕ್ಡೌನ್ ಟೈಮಲ್ಲಿ ಸಿಗರೇಟ್ ಖರೀದಿಗಾಗಿ 20 ಕಿಲೋಮೀಟರ್ ಬೈಕಲ್ಲಿ ಬಂದಿರೋ ಆಸಾಮಿಯೊಬ್ಬ ಪೊಲೀಸರ ಕೈಗೆ ಸಿಕ್ಕಿರುವ ಪ್ರಸಂಗ ನಡೆದಿದೆ.
ಯಲಹಂಕದ ಚಿಕ್ಕಬೊಮ್ಮಸಂದ್ರದ ನಿವಾಸಿ ಫರ್ದಾಮ್ ಎಂಬಾತ ಸಿಗರೇಟ್ ಖರೀದಿಗಾಗಿ ಕೆ.ಆರ್.ಮಾರ್ಕೆಟ್ಗೆ ಬಂದಿದ್ದರು. ಸಿಗರೇಟ್ ಖರೀದಿಸಿ ವಾಪಸ್ ಮನೆಗೆ ಹೋಗೋ ವೇಳೆಯಲ್ಲಿ ಯಲಹಂಕ ಟ್ರಾಫಿಕ್ ಪೊಲೀಸರು ಜಕ್ಕೂರು ಸಿಗ್ನಲ್ ಬಳಿ ಬೈಕ್ಅನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, "ಸರ್, ಐ ಆ್ಯಮ್ ಎ ಚೈನ್ ಸ್ಮೋಕರ್.. ಐ ಕಾಂಟ್ ಲೀವ್ ವಿಥೌಟ್ ಸ್ಮೋಕಿಂಗ್... ಪ್ಲೀಸ್ ಲೀವ್ ಮಿ"(ಸ್ಮೋಕ್ ಮಾಡದೆ ನಾನು ಬದುಕಲಾರೆ, ನನ್ನನ್ನು ಬಿಟ್ಟುಬಿಡಿ) ಎಂದು ಪರ್ಧಾಮ್ ಕೋರಿಕೆ ಇಟ್ಟಿದ್ದಾರೆ.
ತುರ್ತು ಅಗತ್ಯದ ವಸ್ತಗಳ ಖರೀದಿಗೆ ಅವಕಾಶ ನೀಡಿದ್ದರೆ, ಸಿಗರೇಟ್ ಖರೀದಿಗಾಗಿ ವಾಹನ ತೆಗೆದುಕೊಂಡು ರಸ್ತೆಗೆ ಬಂದಿದ್ದಕ್ಕಾಗಿ ಬೈಕ್ಅನ್ನು ಸೀಜ್ ಮಾಡಿದ ಯಲಹಂಕ ಟ್ರಾಫಿಕ್ ಪೊಲೀಸರು, ನಡ್ಕೊಂಡ್ ಮನೆಗೆ ಹೋಗಿ ಅಂತ ಕಳಿಸಿದ್ದಾರೆ.