ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರವಾಹನಗಳ ಕಳವು ಪ್ರಕರಣ ಸಂಬಂಧಿಸಿದಂತೆ ಒಬ್ಬನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿ, 7 ಬೈಕ್ಗಳನ್ನು ವಶಕ್ಕೆ ಪಡೆದಿದ್ದು, ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ.
ಎ1 ಆರೋಪಿ ಬಾಗೇಪಲ್ಲಿಯ ನರಸಿಂಹಮೂರ್ತಿ ಬಂಧಿತ. ಎ2 ಆರೋಪಿ ಜೈ ಕುಮಾರ್ ತಲೆಮರೆಸಿಕೊಂಡಿದ್ದಾನೆ.
ಈ ಇಬ್ಬರೂ ಆರೋಪಿಗಳು ಜಿಲ್ಲೆಯ ನಂಧಿಗಿರಿಧಾಮ, ಶಿಡ್ಲಟ್ಟ, ಬಾಗೇಪಲ್ಲಿ, ಬೆಂ.ಗ್ರಾಮಾಂತರ ಜಿಲ್ಲೆಯ ಯಲಹಂಕ, ರಾಜಾನುಕುಂಟೆ, ಹೊಸಕೋಟೆ, ಚಿಕ್ಕಜಾಲ ಠಾಣೆ ವ್ಯಾಪ್ತಿ ಸೇರಿ ಒಟ್ಟು 7 ದ್ವಿಚಕ್ರ ವಾಹನಗಳನ್ನು ಕದ್ದಿದ್ದರು ಎನ್ನಲಾಗಿದೆ.
ಬಾಗೇಪಲ್ಲಿ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಸಬ್ ಇನ್ಸ್ಪೆಕ್ಡರ್ ನಾಗಮ್ಮ, ಪೊಲೀಸ್ ಸಿಬ್ಬಂದಿ ವೆಂಕಟರಮಣ, ಸುರೇಶ್, ಧನಂಜಯ ಕುಮಾರ್, ಸಾಗರ್, ವೆಂಕಟಶಿವ, ಕೃಷ್ಣಪ್ಪ, ಶಂಕರಪ್ಪ, ರವಿಕುಮಾರ್, ಮುರಳಿಕೃಷ್ಣ ಕಾರ್ಯಾಚರಣೆ ನಡೆಸಿದ್ದರು.