ದುಷ್ಕರ್ಮಿಗಳಿಂದ ಬೈಕ್ ಕಳವು

Mul_Bike Stole
Published on

ಪಡುಬಿದ್ರಿ: ಕೋಟೆ ಗ್ರಾಮದ ಹಾಲು ಡೇರಿ ಮುಂಭಾಗ ನಿಲ್ಲಿಸಲಾಗಿದ್ದ ಬೈಕನ್ನು ದುಷ್ಕರ್ಮಿಗಳು ಮಂಗಳವಾರ ಕಳವುಗೈದಿದ್ದಾರೆ. ಅದೇ ಗ್ರಾಮದ ಸುಂದರ ಎಂಬುವರಿಗೆ ಬೈಕ್ ಸೇರಿದ್ದು, ಹಾಲಿನ ಡೇರಿಗೆ ಹೋಗುವ ವೇಳೆ ಮರೆತು ಕೀಯನ್ನು ಬೈಕ್‌ನಲ್ಲೇ ಇಟ್ಟಿದ್ದರು. ಡೇರಿಯಿಂದ ವಾಪಸ್ ಬಂದಾಗ ಬೈಕ್ ಕಳವಾಗಿರುವುದು ಗೊತ್ತಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net