

ಮದ್ದೂರು: ಟ್ರಾೃಕ್ಟರ್ ಹಾಗೂ ಬೈಕ್ ನಡುವೆ ಮಂಗಳವಾರ ಡಿಕ್ಕಿಯಾಗಿ ಸವಾರ ಸಾವಿಗೀಡಾಗಿದ್ದಾನೆ.
ತಾಲೂಕಿನ ನಗರಕೆರೆ ಗ್ರಾಮದ ವೈದೇಶ್(33) ಮೃತರು. ಮಂಗಳವಾರ ಸಂಜೆ 7 ಗಂಟೆಯಲ್ಲಿ ತನ್ನ ಗ್ರಾಮದಿಂದ ಮದ್ದೂರು ಪಟ್ಟಣಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮದ್ದೂರು ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣ ಬಳಿಯೇ ಅಪಘಾತ ಸಂಭವಿಸಿದ ಸುಮಾರು 50 ನಿಮಿಷವಾದರೂ ಸ್ಥಳಕ್ಕೆ ಆಂಬುಲೆನ್ಸ್ ಹಾಗೂ ಪೊಲೀಸರು ಆಗಮಿಸದ ಕಾರಣ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಪೊಲೀಸರನ್ನು ಗ್ರಾಮಸ್ಥರು ಹಾಗೂ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಅಷ್ಟದರೂ ಆಂಬುಲೆನ್ಸ್ ಬಾರದೆ ಇದ್ದಾಗ ಯುವಕನನ್ನು ಆಟೋದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಯುವಕ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಪಟ್ಟಣದ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಶಾಸಕ ಕೆ. ಎಂ. ಉದಯ್, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.