ಗಂಡಸಿ: ಸೋಮವಾರ ರಾತ್ರಿ ಗಂಡಸಿ ಹ್ಯಾಂಡ್‌ಪೋಸ್ಟ್- ಹಾಸನ ರಸ್ತೆಯ ಬೇವಿನ ಮರದ ಕೂಡು (ಶ್ರೀರಾಮಪುರ ) ಗೇಟ್ ತಿರುವಿನ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಸವಾರ ವಡಗರಹಳ್ಳಿ ಪ್ರಶಾಂತ್(32) ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಡಸಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.