ಪಡುಬಿದ್ರಿ: ಕೌಟುಂಬಿಕ ಹಾಗೂ ಸಾವಾಜಿಕ ಹಿಂಸೆ ಮತ್ತು ದೌರ್ಜನ್ಯ ವಿರುದ್ಧ ಜನರನ್ನು ಎಚ್ಚರಿಸಿ, ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಕಟಪಾಡಿ ವನಸುಮ ಟ್ರಸ್ಟ್ ನೇತೃತ್ವದಲ್ಲಿ ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಅವರು ಮೂರು ರಾಜ್ಯಗಳಲ್ಲಿ ನಡೆಸಲಿರುವ ಜಾಗೃತಿ ಬೈಕ್ ರ‌್ಯಾಲಿಗೆ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಭಾನುವಾರ ಚಾಲನೆ ನೀಡಿದರು.
ಕಾಪು ಶ್ರೀ ಹೊಸ ವಾರಿಗುಡಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 12 ದಿನಗಳ ರ‌್ಯಾಲಿಯಲ್ಲಿ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿ.ಮೀ. ಸಂಚರಿಸಲಿದ್ದಾರೆ. ರ‌್ಯಾಲಿ ಸಂದರ್ಭ ರಾಜ್ಯಗಳು ಮತ್ತು ಜಿಲ್ಲೆಗಳ ವಿವಿಧ ಸಂ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂವಾದ, ಸಂವಹನ ನಡೆಸಲಿದ್ದಾರೆ.
ಕಾಪು ಶ್ರೀ ಹೊಸ ವಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಟಪಾಡಿ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು, ಅಭಿಲಾಷ್ ಬಿ.ಎ., ಕಾರ್ತಿಕೇಯ ಮಧ್ಯಸ್ಥ, ಪ್ರಶಾಂತ್ ಶೆಟ್ಟಿ, ರಂಜಿತಾ ಶೇಟ್, ಕಾವ್ಯವಾಣಿ ಕೊಡಗು, ಭಾಸ್ಕರ್ ಉದ್ಯಾವರ, ಮಹೇಶ್ ಅಂಚನ್ ಕಟಪಾಡಿ, ರಾವೇಂದ್ರ ಪ್ರಭು, ಉದಯ್ ನಾಯ್ಕ, ಶ್ರೀಕಾಂತ್ ಆಚಾರ್ಯ ಉಪಸ್ಥಿತರಿದ್ದರು.