ಬೊಮ್ಮನಹಳ್ಳಿ ಬಿಜೆಪಿ ಭದ್ರಕೋಟೆಯಲ್ಲಿ ಸತೀಶ್​ ರೆಡ್ಡಿ ಪರ ಬೈಕ್​ ರ‍್ಯಾಲಿ

Bike Rally
Published on

ಬೊಮ್ಮನಹಳ್ಳಿ: ವಿಧಾನಸಭಾ ಕ್ಷೇತ್ರದಲ್ಲಿ ದಿನದಂದು ದಿನಕ್ಕೆ ಚುನಾವಣೆ ಕಾವೇರುತ್ತಿದ್ದು, ಕಾಂಗ್ರೆಸ್​ ಪಕ್ಷದ ವಿರುದ್ಧ ತಿರುಗಿಬಿದ್ದಿರುವ ಶಾಸಕ ಎಂ. ಸತೀಶ್​ರೆಡ್ಡಿ ತಮ್ಮ ಬೆಂಬಲಿಗರ ಹಾಗೂ ಕಾರ್ಯಕರ್ತರ ಜೊತೆ ಸಾವಿರಾರು ಜನರ ಜೊತೆ ಭರ್ಜರಿ ಬೈಕ್​ ರ್ಯಾಲಿ ಮೂಲಕ ರೋಡ್​ ಶೋ ನಡೆಸಿದರು.

ಬೊಮ್ಮನಹಳ್ಳಿ ಬಿಜೆಪಿ ಭದ್ರಕೋಟೆ

ಬೊಮ್ಮನಹಳ್ಳಿ ವ್ಯಾಪ್ತಿಯ ಹಲವೆಡೆ ಸಂಚರಿಸಿ ಮಾತನಾಡಿ, ಬೊಮ್ಮನಹಳ್ಳಿ ಬಿಜೆಪಿ ಭದ್ರಕೋಟೆಯಾಗಿದೆ. ಇಲ್ಲಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಹೋದ ಕಡೆಯಲ್ಲೆಲ್ಲ ನನ್ನ ವಿರುದ್ಧ ಏಕವಚನ ಬಳಸಿ ಮಾತನಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಜನರೇ ಉತ್ತರ ನೀಡುತ್ತಾರೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕೋವಿಡ್​ ಸಂದರ್ಭದಲ್ಲಿ ನಾನು ಮಾಡಿದ ಜನ ಸೇವೆಯನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದು, ಚುನಾವಣೆಯಲ್ಲಿ ಆಶೀರ್ವದಿಸಲಿದ್ದಾರೆ. ಪ್ರಬುದ್ಧ ಜನತೆ ಈ ಬಾರಿ ನರೇಂದ್ರ ಮೋದಿಯವರ ಭವ್ಯ ಭಾರತ ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದು ಬಿಜೆಪಿ ಹೆಚ್ಚಿನ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದರು.

ದೇಶದ ಭದ್ರಬುನಾದಿಗೆ ಜನ ಬಿಜೆಪಿಗೆ ಮತ ಹಾಕಬೇಕು

ಮಾಜಿ ಉಪ ಮಹಾಪೌರ ರಾಮ್​ಮೋಹನ್​ರಾಜ್​ ಮಾತನಾಡಿ, ದೇಶದ ಭದ್ರಬುನಾದಿಗೆ ಜನ ಬಿಜೆಪಿಗೆ ಮತ ಹಾಕಬೇಕು. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ, ಬಳಿಕ ಕ್ಷೇತ್ರದಿಂದ ಹೊರ ಹೋಗುವವರಿಗೆ ಮತ ಹಾಕಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಅಭಿವೃದ್ಧಿಗಾಗಿ ಸತೀಶ್​ ರೆಡ್ಡಿಗೆ ಮತ ಹಾಕಿ ಎಂದು ಮನವಿ ಮಾಡಿದರು. ನಟಿ ಅನುಷ್ಕಾ ರೈ, ಮುಖಂಡರಾದ ರಮೇಶ್​, ಸಯ್ಯದ್​ ಸಲಾಂ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net