ಕಾಸರಗೋಡು: ತಳಂಗರೆ ಪಳ್ಳಿಕ್ಕಾಲ್ನಲ್ಲಿ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆಯುತ್ತಿದ್ದ ಅಹಮ್ಮದ್ ಕಬೀರ್(26) ಮೃತಪಟ್ಟಿದ್ದಾರೆ. ಅಹಮ್ಮದ್ ಕಬೀರ್ ಚಲಾಯಿಸುತ್ತಿದ್ದ ಬೈಕ್ ಅ.23ರಂದು ಪಳ್ಳಿಕ್ಕಾಲ್ನಲ್ಲಿ ಮಗುಚಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.