ಬಸ್‌ನಡಿಗೆ ಬಿದ್ದ ಬೈಕ್, ಸವಾರನಿಗೆ ಗಂಭೀರ ಗಾಯ: ಗುರುಪುರ ಬಂಡಸಾಲೆಯಲ್ಲಿ ಅವಘಡ

gur-may-28-accident(2)
ಖಾಸಗಿ ಬಸ್‌ನಡಿಗೆ ಬಿದ್ದ ಬೈಕ್.
Published on

ಗುರುಪುರ: ಇಲ್ಲಿಗೆ ಸಮೀಪದ ಬಂಡಸಾಲೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್‌ನಡಿಗೆ ಬೈಕ್ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಓವರ್‌ಟೇಕ್ ಮಾಡುವ ಭರದಲ್ಲಿ ಘಟನೆ

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ, ಗಂಜಿಮಠ ಸಮೀಪದ ಗುರುಕಂಬಳ ನಿವಾಸಿ ಅಮಾನ್ ಎಂಬಾತ ಮಂಗಳೂರಿನತ್ತ ವೇಗವಾಗಿ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಬಸ್ಸೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಮುಂಬೈಗೆ ಸಾಗುತ್ತಿದ್ದ ಬಸ್‌ನ ಅಡಿಗೆ ಬಿದ್ದಿದೆ. ಬೈಕ್ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net