ಮೂಗುತಿ ರಿಪೇರಿಗೆಂದು ಬಂದ ಮಹಿಳೆಯಿಂದ ಚಿನ್ನ ಕಳವು

FIR-2
Published on

ಮಂಗಳೂರು : ಚಿನ್ನದಂಗಡಿಗೆ ಮೂಗುತಿ ರಿಪೇರಿಗೆಂದು ಬಂದ ಮಹಿಳೆ 3.54 ಲ.ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿರುವ ಘಟನೆ ಕುಲಶೇಖರದಲ್ಲಿ ನಡೆದಿದೆ.
ಮಹಿಳೆ ಮೇ 25ರಂದು ಮಧ್ಯಾಹ್ನ ಅಂಗಡಿಗೆ ಬಂದು ಬೆಂಡಾದ ತನ್ನ ಮೂಗುತಿಯನ್ನು ಸರಿ ಮಾಡಿಕೊಡುವಂತೆ ಹೇಳಿದರು. ಅಂಗಡಿಯ ಮಾಲೀಕರು ಒಳಗಿನ ಕೋಣೆಗೆ ಹೋಗಿ 10 ನಿಮಿಷದಲ್ಲಿ ಮೂಗುತಿಯನ್ನು ಸರಿ ಮಾಡಿ ತಂದುಕೊಟ್ಟರು. ಆಕೆಯಿಂದ ರಿಪೇರಿಯ ಹಣ ಪಡೆದಿರಲಿಲ್ಲ. ಆಕೆ ಅಲ್ಲಿಂದ ಹೋದ ಬಳಿಕ ಮಾಲೀಕರು ಈ ಹಿಂದೆ ತಯಾರಿಸಿದ ಗ್ರಾಹಕರ ಚಿನ್ನ ಮತ್ತು ಮಾರಾಟ ಮಾಡಲು ಶೋಕೇಸ್‌ನ ಒಳಗೆ ಬಾಕ್ಸ್‌ನಲ್ಲಿ ಇಟ್ಟಿದ್ದ ಚಿನ್ನವನ್ನು ಪರಿಶೀಲಿಸಿದಾಗ ಶೋಕೇಸ್ ಸ್ವಲ್ಪ ತೆರೆದ ಸ್ಥಿತಿಯಲ್ಲಿತ್ತು. ಬಾಕ್ಸ್ ನೋಡಿದಾಗ 1 ಚಿನ್ನದ ರೋಪ್ ಸರ, ವಿವಿಧ ಡಿಸೈನ್‌ನ 5 ಉಂಗುರಗಳು, ಬೆಂಡೋಲೆ, ಚಿನ್ನದ ಪದಕ, ಮೂಗುತಿಗಳು ಸೇರಿದಂತೆ ಸುಮಾರು 3.54 ಲ.ರೂ ಮೌಲ್ಯದ ಒಟ್ಟು ಸುಮಾರು 59 ಗ್ರಾಂ ಚಿನ್ನ ಕಳವಾಗಿತ್ತು ಎಂದು ಕದ್ರಿ ಠಾಣೆಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net