ಬೈಕ್ ಮೇಲೆ ಬಸ್ ಹರಿದು ಇಬ್ಬರ ಸಾವು

141
Published on

ಜಗಳೂರು: ಪಟ್ಟಣದ ಮಹಾತ್ಮ ಗಾಂಧಿ ಹಳೇ ವೃತ್ತದ ಸಮೀಪದ ಎನ್‌ಎಂಸಿ ಹೋಟೆಲ್ ಮುಂಭಾಗ ಬುಧವಾರ ಸಂಜೆ ಬೈಕ್ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಮೃತಪಟ್ಟಿದ್ದಾರೆ.

ತಾಲೂಕಿನ ತಮಲೇಹಳ್ಳಿ ಗ್ರಾಮದ ರಾಜು (42), ಓಬಳೇಶ್ (60) ಮೃತಪಟ್ಟವರು.

ಹೋಟೆಲ್ ಎದುರು ಬೈಕ್ ಚಲಿಸುತ್ತಿದ್ದಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಬಸ್‌ನ ಚಕ್ರಕ್ಕೆ ಸಿಲುಕಿಕೊಂಡಾಗ ಮೇಲೆ ಹರಿದಿದೆ. ಬೈಕ್ ಕೂಡ ಸಂಪೂರ್ಣ ಜಖಂಗೊಂಡಿದೆ. ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅಸುನೀಗಿದ್ದಾನೆ.

ಸ್ಥಳಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ, ಪಿಐ ಡಿ. ಶ್ರೀನಿವಾಸ್, ಪಿಎಸ್‌ಐ ಮಂಜುನಾಥ್ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಬಸ್ ಚಾಲಕನ ವಿರುದ್ಧ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net