ಬೈಕ್‌ಗೆ ಬಸ್ ಡಿಕ್ಕಿ, ತಂದೆ-ಮಗನಿಗೆ ಗಾಯ

Sirwara Bus on Paddy field
ಭತ್ತದ ಗದ್ದೆಗೆ ನುಗ್ಗಿರುವ ಸಾರಿಗೆ ಬಸ್.
Published on

ಸಿರವಾರ: ದ್ವಿಚಕ್ರ ವಾಹನದ ಮೇಲೆ ಸರ್ಕಾರಿ ಬಸ್ ಹರಿದು, ಬೈಕ್‌ನಲ್ಲಿದ್ದ ತಂದೆ-ಮಗ ಗಾಯಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಅತ್ತನೂರು ಹೊರವಲಯದ ಪೆಟ್ರೋಲ್ ಬಂಕ್ ಬಳಿ ನಡೆದ ಘಟನೆಯಲ್ಲಿ ನಿಲೋಗಲ್ ಕ್ಯಾಂಪಿನ ನಾರಾಯಣ ಅವರ ಕಾಲು ಮುರಿದಿದ್ದು, ಹಿಂಬದಿಯಲ್ಲಿದ್ದ ಮಗ ಕಾರ್ತಿಕಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪಟ್ಟಣದಿಂದ ರಾಯಚೂರು ಕಡೆ ಹೊರಟಿದ್ದ ಸಾರಿಗೆ ಬಸ್ ಚಾಲಕ, ಮುಂದಿದ್ದ ಮತ್ತೊಂದು ಬಸ್ಸನ್ನು ಓವರ್ ಟೇಕ್ ಮಾಡಲು ಹೋಗಿ ಈ ಘಟನೆ ನಡೆದಿದೆ. ಅಪಘಾತದ ನಂತರ ಬಸ್ ರಸ್ತೆ ಪಕ್ಕದಲ್ಲಿದ್ದ ಭತ್ತದ ಗದ್ದೆಗೆ ವಾಲಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net