

ಕಾಸರಗೋಡು: ನೀಲೇಶ್ವರ ಪಾಲಾಯಿ ಸನಿಹ ಬೈಕ್ ಮತ್ತು ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ, ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನೀಲೇಶ್ವರ ಅಲಂಕಿಳಿ ನಿವಾಸಿ, ಕಯ್ಯೂರು ಸರ್ಕಾರಿ ಐಟಿ ಕಾಲೇಜು ವಿದ್ಯಾರ್ಥಿ ವಿಷ್ಣು (18)ಮೃತಪಟ್ಟ ಯುವಕ. ವಿಷ್ಣು ಬೈಕಿನಲ್ಲಿ ಕಾಲೇಜಿಗೆ ತೆರಳುವ ಮಧ್ಯೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.