ಶತಾಯುಷಿ ರಾಮಣ್ಣ ಶೆಟ್ಟಿ ಅವರ ಅನುಭವ ದಾರಿದೀಪ -ಶಾಸಕ ವೇದವ್ಯಾಸ ಕಾಮತ್

mng-8june-ramanna shetty
Published on



ಮಂಗಳೂರು : ಶತಾಯುಷಿ, ನಿವೃತ್ತ ಪೋಸ್ಟ್ ಮಾಸ್ಟರ್ ರಾಮಣ್ಣ ಶೆಟ್ಟಿ ಅವರು ನೂರನೇ ವಸಂತಕ್ಕೆ ಕಾಲಿಟ್ಟ ಸಂಭ್ರಮಾಚರಣೆ ಬಿಕರ್ನಕಟ್ಟೆಯ ಅವರ ನಿವಾಸದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಶಾಸಕ ವೇದವ್ಯಾಸ ಕಾಮತ್ ಬಾಲ್ಯದಲ್ಲಿ ದೂರದ ಊರುಗಳಲ್ಲಿರುವ ನಮ್ಮ ಬಂಧು ಮಿತ್ರರ ಪತ್ರಕ್ಕಾಗಿ ಅಂಚೆಯಣ್ಣನ ಬರುವಿಕೆಗೆ ಕಾತರದಿಂದ ಕಾಯುತ್ತಿದ್ದೆವು. ಎಲ್ಲರ ಬದುಕಿನಲ್ಲೂ ಇಂತಹ ಅಂಚೆಯಣ್ಣಂದಿರ ಸುಮಧುರ ನೆನಪುಗಳು ಇದ್ದೇ ಇರುತ್ತವೆ. ರಾಮಣ್ಣ ಶೆಟ್ಟಿ ಅವರ ಹಿರಿತನದ ಅನುಭವ ನಮ್ಮೆಲ್ಲರಿಗೆ ದಾರಿ ದೀಪವಾಗಬೇಕು ಎಂದರು.
ರಮೇಶ್ ಕಂಡೆಟ್ಟು, ಕಾವ್ಯ ನಟರಾಜ್, ಅಜಯ್, ನವೀನ್ ಶೆಣೈ, ಯೋಗೀಶ್ ಶೆಣೈ, ನಾಗರಾಜ್, ಬಿಕರ್ನಕಟ್ಟೆ ಮಂದಿರದ ಟ್ರಸ್ಟಿಗಳಾದ ಭರತ್ ಕುಮಾರ್, ವಿ.ಜಯರಾಮ್, ಜಿತೇಂದ್ರ ರೈ, ಬಿಕರ್ನಕಟ್ಟೆ ಶಾಲೆಯ ಶಿಕ್ಷಕಿ ಸಹನಾ,ನಿವೃತ್ತ ಎಎಸ್‌ಐ ಕೃಷ್ಣ ಕುಮಾರ್, ಜಗದೀಶ್ , ಡಾ.ವಿಜಯ ಉಪಸ್ಥಿತರಿದ್ದರು
1924ರ ಜೂ.6ರಂದು ಜನಿಸಿದ ರಾಮಣ್ಣ ಶೆಟ್ಟಿ ಅವರು 23ನೇ ವಯಸ್ಸಿನಲ್ಲಿ ಕದ್ರಿ ಅಂಚೆ ಕಚೇರಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಪಯ್ಯನೂರಿನಿಂದ ಶಿರೂರು ಗಡಿಯವರೆಗೆ ಕರ್ತವ್ಯ ನಿರ್ವಹಿಸಿ ಅಂತಿಮವಾಗಿ ಕುಲಶೇಖರದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದ್ದರು.ಕಲಾ ಪ್ರೇಮಿ ಆಗಿದ್ದ ಅವರು ಭಜನೆ, ಹಾರ್ಮೋನಿಯಂನಲ್ಲಿ ಆಸಕ್ತಿ ಹೊಂದಿ ಹಲವು ಸನ್ಮಾನಗಳಿಗೆ ಭಾಜನರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net