ಭೀಕರ ಅಪಘಾತ: ಗಂಡ-ಹೆಂಡತಿ ಇಬ್ಬರೂ ಸ್ಥಳದಲ್ಲೇ ಸಾವು..

Accident
ಬೊಲೆರೊ ಡಿಕ್ಕಿಹೊಡೆದಿರುವ ರಭಸಕ್ಕೆ ಛಿದ್ರಗೊಂಡಿರುವ ದ್ವಿಚಕ್ರವಾಹನ
Published on

ಚಿಕ್ಕಬಳ್ಳಾಪುರ: ಭೀಕರ ಅಪಘಾತವೊಂದರಲ್ಲಿ ಗಂಡ ಹೆಂಡತಿ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಮೃತಪಟ್ಟಿರುವ ಇಬ್ಬರೂ ಶಿಕ್ಷಕರಾಗಿ ಉದ್ಯೋಗದಲ್ಲಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ದ್ವಿಚಕ್ರವಾಹನಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ದಯಾನಂದ (45) ಮತ್ತು ರಾಜೇಶ್ವರಿ (40) ಸಾವಿಗೀಡಾದ ದಂಪತಿ. ಪತಿ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪತ್ನಿ ಮ್ಯಾಕಲಗಡ್ಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಇವರು ಇಂದು ಶ್ರೀನಿವಾಸಪುರದಿಂದ ಕರ್ತವ್ಯ ಮುಗಿಸಿ ಚಿಂತಾಮಣಿಯಲ್ಲಿರುವ ಮನೆಗೆ ತೆರಳುತ್ತಿದ್ದಾಗ ಚಿಂತಾಮಣಿ ಕಡೆಯಿಂದ ಶ್ರೀನಿವಾಸಪುರಕ್ಕೆ ತೆರಳುತ್ತಿದ್ದ ಬೊಲೆರೊ ಗೂಡ್ಸ್​ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿದ ಬೊಲೆರೊ ವಾಹನ ಚಾಲಕ ಮೊಹಮ್ಮದ್ ರಫೀಕ್​ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net