ಬೈಕ್ ಅಪಘಾತ, ಮಹಿಳೆ ಸಾವು

2-RNR-08 lata kumbar
Published on

ರಾಣೆಬೆನ್ನೂರ: ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಹಿಂಬದಿ ಚಕ್ರ ಹಾಯ್ದು ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಜಾನುವಾರು ಮಾರುಕಟ್ಟೆ ಬಳಿ ಬುಧವಾರ ಸಂಭವಿಸಿದೆ.

ತಾಲೂಕಿನ ಹಲಗೇರಿ ಗ್ರಾಮದ ಲತಾ ಶಿವಪ್ಪ ಕುಂಬಾರ (38) ಮೃತ ಮಹಿಳೆ. ವಾಹನ ಓಡಿಸುತ್ತಿದ್ದ ಶಿವಪ್ಪ ಎಂಬುವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾನುವಾರು ಮಾರುಕಟ್ಟೆ ಬಳಿಯಿದ್ದ ಪೆಟ್ರೋಲ್ ಬಂಕ್​ಗೆ ತೆರಳುತ್ತಿದ್ದ ಸಮಯದಲ್ಲಿ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಹಿಂಬದಿ ಕುಳಿತಿದ್ದ ಲತಾ ಕೆಳಗೆ ಬಿದ್ದಿದ್ದು, ಅವರ ಮೇಲೆ ಬಸ್ ಬಸ್ ಹಾಯ್ದು ಹೋಗಿದೆ ಎನ್ನಲಾಗಿದೆ. ಈ ಕುರಿತು ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net