ಬೈಕ್ ಅಪಘಾತದಲ್ಲಿ ಸವಾರ ಸಾವು

Bike, accident, rider, death,
Published on

ನಾಯಕನಹಟ್ಟಿ: ಸಮೀಪದ ಭೀಮಗೊಂಡನಹಳ್ಳಿ ಬಳಿ ಶುಕ್ರವಾರ ಸಂಜೆ ಬೈಕ್ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಯುವಕನೊಬ್ಬ ಗಾಯಗೊಂಡಿದ್ದಾನೆ.

ಬಿ.ಆರ್.ಸುರೇಶ್ (20) ಮೃತ ಯುವಕ. ಮುಸ್ಟೂರು ಗ್ರಾಮದಿಂದ ಸ್ವಗ್ರಾಮವಾದ ಬೈರನಾಯಕನಹಟ್ಟಿ ಕಡೆಗೆ ಸುರೇಶ್ ಮತ್ತು ಮಾರುತಿ ಪ್ರಯಾಣಿಸುತ್ತಿದ್ದರು. ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ.

ಮಾರುತಿಗೆ ತೀವ್ರತರ ಗಾಯಗಳಾಗಿದ್ದು ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಎಸ್‌ಐ ದೇವರಾಜ ಸ್ಥಳ ಪರಿಶೀಲಿಸಿದರು. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net