VIDEO| ಕಾರು ಗುದ್ದಿದ ರಭಸಕ್ಕೆ ರಾಯಲ್ ಎನ್ಫೀಲ್ಡ್ ಎರಡು ಪೀಸ್: ಸ್ವಾಧೀನ ಕಳೆದುಕೊಂಡ ಸವಾರನ ಅರ್ಧ ದೇಹ!

Bike Driver
Published on

ಬೆಂಗಳೂರು: ನಗರದ ಮೂಡಲಪಾಳ್ಯದಲ್ಲಿ ಕಳೆದ ಭಾನುವಾರ ರಾತ್ರಿ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿದೆ.

ಅತೀ ವೇಗವಾಗಿ‌ ಬಂದ ಹೊಂಡ ಸಿವಿಕ್ ಕಾರು ಎದುರಿನ ರಾಯಲ್ ಎನ್ಫೀಲ್ಡ್ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಬೈಕ್​ ಎರಡು ಪೀಸ್ ಆಗಿದೆ. ಗುದ್ದಿದ‌ ರಭಸಕ್ಕೆ ಬೈಕ್ ಸವಾರ ಮೇಲಕ್ಕೆ ಹಾರಿಬಿದ್ದಿದ್ದಾನೆ.

ರಾಂಗ್ ಸೈಡ್​ನಿಂದ ಬಂದು ಕಾರು ಗುದ್ದಿದ್ದು, ಬೈಕ್​ ಸವಾರ ಅಕ್ಷಯ್ (28 ) ತೀವ್ರ ಗಾಯಗೊಂಡಿದ್ದಾರೆ. ಅಕ್ಷಯ್​​ ಸೊಂಟದಿಂದ ಮೇಲೆ ಸ್ವಾದೀನ ಕಳೆದುಕೊಂಡಿದ್ದು, ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net