ಬೈಕ್ ಅಪಘಾತ ಬರ್ಥ್ ಡೇ ಬಾಯ್ ಸೇರಿ ವಿದ್ಯಾರ್ಥಿಗಳಿಬ್ಬರ ಸಾವು

Bike Accident_2
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ರಿಂಗ್‌ರೋಡ್‌ನಲ್ಲಿ ಸಂಭವಿಸಿ ಬೈಕ್ ಅಪಘಾತದಲ್ಲಿ ಜನ್ಮ ದಿನದ ಸಂಭ್ರಮದಲ್ಲಿದ್ದಾತ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗನ ಜನ್ಮದಿನದ ಸಂಭ್ರಮವಿದ್ದ ಮನೆಯಲ್ಲಿ ಸೂತಕ ಆವರಿಸಿದೆ.
ಅಲಿ ಅಬ್ಬಾಸ್(೧೭) ಹಾಗೂ  ಇರ್ಫಾನ್ (೧೭) ಮೃತ ವಿದ್ಯಾರ್ಥಿಗಳು. ಇಬ್ಬರು ಎಸ್‌ಎಸ್‌ಎಲ್‌ಸಿ ಓದುತ್ತಿದ್ದರು.  
ಮೃತಪಟ್ಟಿರುವ ಅಲಿ ಅಬ್ಬಾಸ್ ಜನ್ಮ ದಿನವಿತ್ತು.ಸ್ನೇಹಿತರೆಲ್ಲರು ಸೇರಿಕೊಂಡು ನಾಲ್ಕೆÊದು ಬೈಕ್‌ಗಳ ಮೇಲೆ ಜನ್ಮ ದಿನ ಆಚರಿಸಲು ಹೊಟೇಲ್ ಕಡೆಗೆ ಹೋಗುತ್ತಿದ್ದರು. ಈ ವೇಳೆಯಲ್ಲಿ ವಿಧಿಯಾಟದ ಅಟ್ಟಹಾಸಕ್ಕೆ ಜನ್ಮದಿನದಂದೆ  ಕೊನೆಯುಸಿರೆಳೆದ.
ನಗರದ ಹೊರ ವಲಯದ  ಶಹಾಬಾದ ಕ್ರಾಸ್ ರಿಂಗ್‌ರೋಡ್‌ನಿAದ ರಾಮಮಂದಿರ ಕಡೆಗೆ ಬರುವ ರಸ್ತೆಯಲ್ಲಿರುವ ಮೇಲು ಸೇತುವೆಯ ಬಳಿ ರಸ್ತೆ ವಿಭಜಕಕ್ಕೆ ವೇಗವಾಗಿ ಬಂದ ಬೈಕ್ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರು ಡಿವೈಡರ್‌ಗೆ  ಅಪ್ಪಳಿಸಿ ಗಂಭೀರ ಗಾಯಗೊಂಡು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ಥ್ ಡೇ  ಆಚರಿಸಿಕೊಳ್ಳಲು ಹೋಗುತ್ತಿದ್ದ ಮಗ ಹಾಗೂ ಆತನ ಸ್ನೇಹಿತ ಅಪಘಾತದಲ್ಲಿ ಬಲಿಯಾಗಿರುವ ಸುದ್ದಿ ಅರಿಯುತ್ತಲೇ ಕುಟುಂಬದವರು, ಸ್ನೇಹಿತರು, ಬಂಧುಗಳು ದೌಡಾಯಿಸಿದರು. ರೋದನ ಮುಗಿಲು ಮುಟ್ಟಿತ್ತು. ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಸ್ಥಳಕ್ಕೆ ಸಂಚಾರ ಎಸಿಪಿ ಇಸ್ಮಾಯಿಲ್ ಶರೀಫ್, ಇನ್‌ಸ್ಪೆಕ್ಟರ್ ಶಾಂತಿನಾಥ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಸಂಚಾರ ಠಾಣೆ-೩ರಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net