ಬಿಜಕಲ್‌ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಆರ್‌ಡಿಪಿಆರ್ ಆಯುಕ್ತೆ ಭೇಟಿ

Commissioner Priyank Mary Francis Bijakal Visit
ಕುಷ್ಟಗಿ ತಾಲೂಕು ಬಿಜಕಲ್ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕ್ ಮೇರಿ ಫ್ರಾನ್ಸಿಸ್ ಗ್ರಾಮದ ಮಹಿಳೆಯರೊಂದಿಗೆ ಸಮಾಲೋಚಿಸಿದರು.
Published on

ಕುಷ್ಟಗಿ: ತಾಲೂಕಿನ ಬಿಜಕಲ್ ಗ್ರಾಮದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕ್ ಮೇರಿ ಫ್ರಾನ್ಸಿಸ್ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ನಂತರ ಗ್ರಾಮದ ವಿವಿಧ ನೀರಿನ ಮೂಲ, ಚರಂಡಿ, ಪೈಪ್‌ಲೈನ್ ವ್ಯವಸ್ಥೆ ಪರಿಶೀಲಿಸಿದರು. ಪೈಪ್‌ಲೈನ್ ಒಡೆದರೆ ತಕ್ಷಣ ಸರಿಪಡಿಸುವ ಕಾರ್ಯವಾಗಬೇಕು. ಗ್ರಾಮಸ್ಥರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಪ್ರಿಯಾಂಕ್ ಮೇರಿ ಸೂಚಿಸಿದರು.

ಅಸ್ವಸ್ಥಗೊಂಡಿರುವವರ ಹಾಗೂ ಹತೋಟಿಗೆ ಕೈಗೊಂಡಿರುವ ಕ್ರಮಗಳ ಕುರಿತು ಡಿಎಚ್‌ಒ ಅಲಕಾನಂದ ಬಳಿ ಮಾಹಿತಿ ಪಡೆದರು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ತಹಸೀಲ್ದಾರ್ ರಾಘವೇಂದ್ರರಾವ್, ತಾಪಂ ಇಒ ಶಿವಪ್ಪ ಸುಬೇದಾರ್, ಟಿಎಚ್‌ಒ ಆನಂದ್ ಗೋಟೂರು ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net