More

    ಯರಬಳ್ಳಿ ಗ್ರಾಪಂಗೆ ಆರ್‌ಡಿಪಿಆರ್ ಆಯುಕ್ತೆ ಭೇಟಿ

    ಹಿರಿಯೂರು: ತಾಲೂಕಿನ ಯರಬಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದರು.

    ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪ್ರಗತಿ, 13ನೇ ಹಣಕಾಸು ಯೋಜನೆ, ಅನುದಾನ ಬಳಕೆ, ವಸತಿ ಯೋಜನೆ, ಶೌಚಗೃಹ ನಿರ್ಮಾಣ, ಖಾಸಗಿ ಕಂಪನಿಯ ತೆರಿಗೆ ಹಣ ವಸೂಲಿಯಲ್ಲಿನ ಅವ್ಯವಹಾರ, ಬಿಆರ್‌ಜಿಎಫ್ ಯೋಜನೆ ಹಣ ದುರುಪಯೋಗ, ಸಿಬ್ಬಂದಿ ನೇಮಕಾತಿ ಅಕ್ರಮ ಇತರ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಶಿಲ್ಪನಾಗ್ ನೇತೃತ್ವದ ತಂಡ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

    ದಾಖಲೆ ನೀಡಲು ನಕಾರ: ಅವ್ಯವಹಾರದ ಶಂಕೆ ಹಿನ್ನೆಲೆಯಲ್ಲಿ ದಾಖಲೆ ಪರಿಶೀಲನೆ ನಡೆಸಲು ಮುಂದಾದ ಅಧಿಕಾರಿಗಳನ್ನು ಕಚೇರಿ ಹೊರಗಡೆ ತಡೆದು, ದಾಖಲೆ ನೀಡಲು ಅಧಿಕಾರಿಗಳು ನಿರಾಕರಿಸಿದರು ಎನ್ನಲಾಗಿದೆ.

    ಆರ್‌ಡಿಪಿಆರ್ ಇಲಾಖೆ ಅಧಿಕಾರಿಗಳಾದ ನವೀನ್ ಕುಮಾರ್, ಮುಬಾರಕ್, ಷಣ್ಮುಖ, ತಾಪಂ ಇಒ ಹನುಮಂತಪ್ಪ ಇತರರಿದ್ದರು.

    ಯರಬಳ್ಳಿ ಪಂಚಾಯಿತಿ ಒಂದಿಲ್ಲೊಂದು ಕಾರಣಕ್ಕೆ ಸದಾ ವಿವಾದಕ್ಕೆ ಸಿಲುಕುತ್ತಿದೆ. ಕಳೆದ ನಾಲ್ಕು ವರ್ಷ ಭ್ರಷ್ಟಾಚಾರ, ಅಧ್ಯಕ್ಷ-ಉಪಾಧ್ಯಕ್ಷರ ವಜಾ, ಅಧಿಕಾರ ದುರುಪಯೋಗ, ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರ, ಪಿಡಿಒಗಳ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು, ಗ್ರಾಪಂ ಕಚೇರಿಗೆ ಬೆಂಕಿ ಹಚ್ಚಿ ದಾಖಲೆ ನಾಶ, ಭ್ರಷ್ಟಾಚಾರ, ಕ್ರಿಮಿನಲ್ ಕೇಸ್, ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದೆ.

    ಜಿಪಂ ಸಿಇಒ, ಇಲಾಖೆ ಅಧಿಕಾರಿಗಳು ವಿವಿಧ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ್ದರೂ, ರಾಜಕೀಯ ಮೇಲಾಟ, ಆರೋಪ-ಪ್ರತ್ಯಾರೋಪದಿಂದ ಪಂಚಾಯತಿ ಆಡಳಿತ ವ್ಯವಸ್ಥೆ ಅಯೋಮಯವಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts