More

    ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಮೂರು ಲಕ್ಷ ರೂ. ಜಪ್ತಿ

    ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ತೆರೆದಿರುವ ಚೆಕ್ ಪೋಸ್ಟ್​ನಲ್ಲಿ ಭಾನುವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
    ಕೊರ್ಲಹಳ್ಳಿ ಚೆಕ್​ಫೋಸ್ಟ್ ಮೂಲಕ ಕೊಟ್ಟೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಗೂಡ್ಸ್ ವಾಹನ ಪರಿಶೀಲಿಸಿದಾಗ ಕೂಡ್ಲಿಗಿಯ ಬಿ. ಪ್ರವೀಣಕುಮಾರ ಎಂಬುವವರ ಬಳಿ ದಾಖಲೆ ಇಲ್ಲದೆ 3 ಲಕ್ಷ ರೂ. ಇದ್ದ ನಗದನ್ನು ಜಪ್ತಿ ಮಾಡಲಾಗಿದೆ.
    ಎಫ್​ಎಸ್​ಟಿ ಪ್ರಕಾಶ, ಚೆಕ್​ಫೋಸ್ಟ್ ಎಸ್​ಎಸ್​ಟಿ ಶಿವಮೂರ್ತಿ ನಾಯಕ, ಪಿಎಸ್​ಐ ಸುಮಾ ಗೊರಬಾಳ, ಸಿಬ್ಬಂದಿ ವಿನಾಯಕ, ಬಿ.ಎಚ್. ಚೌಡ್ಕಿ, ಬಿ.ಬಿ. ಸೋಂಪುರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts