ಪ್ರಿಯಾಂಕಾ, ಉಪೇಂದ್ರ ಮೊಬೈಲ್ ಹ್ಯಾಕ್: ಬಿಹಾರದ ವಿಕಾಸ್​​ ಕುಮಾರ್​ ಅರೆಸ್ಟ್​.. Upendra Mobile Hack Case

Upendra
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಉಪೇಂದ್ರ ( Upendra Mobile Hack Case)  ಅವರ ಫೋನ್​ ನಂಬರ್​ ಹಾಗೂ ಅಕೌಂಟ್​​ನ್ನು ಸೈಬರ್​ ವಂಚಕರು ಹ್ಯಾಕ್​​ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್​​ ಮಾಡಿದ್ದಾರೆ.

ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಆರೋಪಿ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

20ರಿಂದ 25 ವಯಸ್ಸಿನ ಯುವಕರು ಈ ದಂಧೆಯಲ್ಲಿ ನಿರತರಾಗಿದ್ದು, ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ತೊಡಗಿಗೊಂಡಿರುವ ಆಘಾತಕಾರಿ ವಿಷಯ ಈ ವೇಳೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ವಿಕಾಸ್​​ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ನಡೆದಿದ್ದೇನು?: 

ಸೆ.15ರಂದು ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಆಗಿತ್ತು.  ಈ ವೇಳೆ ಉಪೇಂದ್ರ ಅವರು ವಿಡಿಯೋ ಮಾಡಿ.. ನನ್ನ ಪತ್ನಿ ಪ್ರಿಯಾಂಕಾಗೆ ಒಂದು ನಂಬರ್​ ಇಂದು ಎನೋ ಸಂದೇಶ ಬಂದಿತ್ತು. ಪ್ರಿಯಾಂಕ ಅವರು ಒಂದು ವಸ್ತು ಆರ್ಡರ್​ ಮಾಡಿದ್ದರು ಅದು ಬರುತ್ತದೆ ನಾವು ಹೇಳಿದಂತೆ ಮಾಡಿ ಎಂದು ಹೇಳಿದ್ದಾರೆ. ಆದರೆ ಅದು ಹ್ಯಾಕರ್​ದು ಆಗಿತ್ತು. ನಮಗೆ ಇದು ತಿಳಿಯದೆ ಹ್ಯಾಕರ್​ ನಂಬರ್​ಗೆ ಕರೆ ಮಾಡಿದ್ದೇವೆ. ನಮ್ಮಿಬ್ಬರ ನಂಬರ್​​ ಹ್ಯಾಕ್​ ಆಗಿದೆ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈಗ ಪ್ರಿಯಾಂಕಾ ಅವರುಸದಾಶಿವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಸೈಬರ್ ಕ್ರೈಮ್ ಗೆ ದೂರು ನೀಡಿದ್ದರು. ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ಹಣ ನೀಡುವಂತೆ ಮೆಸೇಜ್ ಮಾಡಲಾಗಿದ್ದು, ಎಮರ್ಜೆನ್ಸಿ ಇದೆ, ಹಣ ನೀಡಿ ಎಂದು ಪ್ರಿಯಾಂಕ ಉಪೇಂದ್ರ ನಂಬರ್ ನಿಂದ ಮೆಸೇಜ್ ಹೋಗಿದೆ ಎಂದು ತಿಳಿದು ಬಂದಿತ್ತು. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net