ಫ್ರೆಂಡ್ಸ್ ಸುಮಾರು ಜನರು ಇದ್ದಾರೆ, ಆದ್ರೆ..;ಗರ್ಲ್​ಫ್ರೆಂಡ್​ ವಿಚಾರದಲ್ಲಿ ಬಿಗ್​ಬಾಸ್​ ಕಾರ್ತಿಕ್ ಹೇಳಿದ್ದೇನು ಗೊತ್ತಾ?

bb karthik
Published on

ಬೆಂಗಳೂರು: ಬಿಗ್​ಬಾಸ್​​ ವಿಜೇತರಾಗಿ ಕಾರ್ತಿಕ್​ ಮಹೇಶ್​​ ಹೊರಹೊಮ್ಮಿದ್ದಾರೆ.  ಬಿಗ್​ಬಾಸ್​​ ಮನೆಯೊಳಗೆ ಇರುವ ವೇಳೆ ಕಾರ್ತಿಕ್ ಮಹೇಶ್ ಅವರಿಗೆ ಗರ್ಲ್​ಫ್ರೆಂಡ್ ಇದ್ದಾರೆ. ಹಾಗಿದ್ದರೂ ಅವರು ಸಂಗೀತಾ ಮತ್ತು ನಮ್ರತಾ ಜೊತೆ ಫ್ಲರ್ಟ್ ಮಾಡಿದ್ದು ಏಕೆ ಎನ್ನುವುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಕಾರ್ತಿಕ್ ಅವರು ಉತ್ತರ ನೀಡಿದ್ದಾರೆ.

ಖಾಸಗಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕಾರ್ತಿಕ್​ ಮಹೇಶ್​​ ಅವರು, ನಿಮ್ಮ ಹುಡುಗಿ ಎಷ್ಟು ಖುಷಿಯಾಗಿದ್ದಾಳೆ ಎಂದು ಕೇಳಲಾಯಿತು. ಇದಕ್ಕೆ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ‘ಯಾರೂ ಕನೆಕ್ಟ್ ಆಗದೇ ಇರಲಿ ಎನ್ನುವ ಕಾರಣಕ್ಕೆ ಹಾಗೆ ಹೇಳುತ್ತಿದ್ದೆ. ಫ್ರೆಂಡ್ಸ್ ಸುಮಾರು ಜನರು ಇದ್ದಾರೆ. ಎಲ್ಲರೂ ಮಾತನಾಡುತ್ತಾರೆ. ನನಗೆ ಕರಿಯರ್​ಮೇಲೆ ಫೋಕಸ್ ಮಾಡಬೇಕಿದೆ. ಅಮ್ಮ ಒಪ್ಪಿಗೆ ಕೊಟ್ಟರೆ ಫ್ರೆಂಡ್ಸ್ ಸರ್ಕಲ್​ನಲ್ಲೇ ಒಬ್ಬರನ್ನು ತೋರಿಸಿ ಒಪ್ಪಿಗೆ ಪಡೆದು ಮದುವೆ ಆಗುತ್ತೇನೆ’ ಎಂದರು ಕಾರ್ತಿಕ್.

ಈ ಮೂಲಕವಾಗಿ ತಮಗೆ ಗರ್ಲ್​ಫ್ರೆಂಡ್ ಇಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ. ಹಾಗಿದ್ರೆ ಸೋಶಿಯಲ್ ಮೀಡಿಯಾದಲ್ಲಿ ಇಷ್ಡು ದಿನಗಳ ಕಾಲ ಕಾರ್ತಿಕ್​​ ಗರ್ಲ್​ಫ್ರೆಂಡ್ ಇವರೆ ಎಂದು ಕೆಲವು ಫೋಟೋಗಳು ಹರಿದಾಡುತ್ತಿದ್ದವು. ಆದರೆ ಈ ಎಲ್ಲಾ ವಿಚಾರಗಳಿಗೂ ಕಾರ್ತಿಕ್ ಸ್ಪಷ್ಟನೆ ನೀಡದ್ದಾರೆ.

ಅತ್ಯಂತ ಯಶಸ್ಸು ಕಂಡ ಹತ್ತನೇ ಐತಿಹಾಸಿಕ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ಅವರು ಗೆಲುವನ್ನು ಸಾಧಿಸಿದ್ದಾರೆ. ಐವತ್ತು ಲಕ್ಷ ರೂಪಾಯಿಗಳು, ಜೊತೆಗೆ ಒಂದು ಮಾರುತಿ ಬ್ರೀಜಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net