‘ಯೋಗ್ಯತೆ ಇದ್ರೆ ನನ್ನೆ ಎದೆಗೆ ಒದ್ದು ನೋಡು’; ಬಿಗ್​ಬಾಸ್​ ಮನೆಯಲ್ಲಿ ಹೊಸ ವರ್ಷಕ್ಕೆ ಹೊಸ ಲೆಕ್ಕಾಚಾರ

Bigg Boss Kannada Vinay Gowda and Tanisha Kuppanda fight
Published on

ಬೆಂಗಳೂರು: ಇನ್ನೇನು ಬಿಗ್ ಬಾಸ್​ ಕನ್ನಡ 10 ಮುಗುತ್ತಿದೆ. ದಿನ ಕಳೆದಂತೆ ಸ್ಪರ್ಧಿಗಳಲ್ಲಿ ಗೆಲ್ಲುವ ಕಿಚ್ಚು ಹೆಚ್ಚಾಗ್ತಿದೆ. ಈ ಬಾರಿ ಮಹಿಳೆ ವಿನ್ನರ್ ಆಗ್ತಾರಾ? ಎನ್ನುವ ನಿರೀಕ್ಷೆ ಹೆಚ್ಚಿನ ಜನರಲ್ಲಿ ಕಾಡುತ್ತಿದೆ. ಇನ್ನು ಈ ವಾರ ಬಿಗ್​ ಬಾಸ್​ ನೀಡಿರುವ ಹೊಸ ಆಟದ ಪ್ರೋಮೋವನ್ನ ಕಲರ್ಸ್​ ಕನ್ನಡ ವಾಹಿನಿ ಹೊರ ಬಿಟ್ಟಿದೆ.

ಬಿಗ್​ ಬಾಸ್​ ಮನೆಯಲ್ಲಿ ಲೆಕ್ಕಾಚಾರದ ಆಟ ಶುರುವಾಗಿದೆ. ಇಷ್ಟು ದಿನ ಒಂದಾದ್ರೆ ಇನ್ನು ಮುಂದೆ ಇನ್ನೊಂದು ಲೆಕ್ಕ ಅಂತ ಬಿಗ್ ಬಾಸ್ ಸ್ಪರ್ಧಿಗಳು ಅಖಾಡಕ್ಕೆ ಇಳಿದಿದ್ದಾರೆ.

ಬಿಗ್​ ಬಾಸ್​ ಕನ್ನಡ ಸೀಸನ್​ 10ರಲ್ಲಿ ದಿನ ಕಳೆದಂತೆ ಕಠಿಣ ಸ್ಪರ್ಧೆ ಶುರುವಾಗ್ತಿದೆ. ಬಿಗ್‌ ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಜನ್ರು ಚರ್ಚೆ ಶುರು ಮಾಡಿದ್ದಾರೆ. ಇದೀಗ ಕಳೆದ 2 ವಾರಗಳಿಂದ ನಡೆದ ಆಟಗಳು ಮಾತ್ರ ಸ್ಪರ್ಧಿಗಳಿಗೆ ನಿದ್ದೆಗೆಡಿಸಿದ್ದಂತಿದೆ. ಪ್ರತಿ ವೀಕೆಂಡ್​ನಲ್ಲೂ ಕಿಚ್ಚನ ಚಪ್ಪಾಳೆ ಮಿಸ್​ ಆಗುತ್ತಿರುವುದಾರು ಏಕೆ ಎಂಬ ಪ್ರಶ್ನೆ ಸ್ಟರ್ಧಿಗಳಿಗೆ ಕಾಡುತ್ತಿದೆ. ಕಳೆದ ವಾರ ಮನೆಯಿಂದ ಎಲ್ಲರ ಪೇರೆಂಟ್ಸ್ ಬಂದಾಗಿನಿಂದ ಕೆಲವರ ಆಟಕ್ಕೆ ಇನ್ನಷ್ಟು ಬಲ ಸಿಕ್ಕಿದಂತಾಗಿದೆ.

ಇದ್ದಿದ್ದು ಇದ್ದಾಗೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ!: ಬಿಡುಗಡೆಯಾದ ಪ್ರೋಮೋದಲ್ಲಿ ಹೊಸ ವರ್ಷಕ್ಕೆ ಹೊಸ ಲೆಕ್ಕಾಚಾರವೆಂಬಂತೆ ಬಿಗ್​ ಬಾಸ್ ಸ್ಪರ್ಧಿಗಳಿಗೆ, ಮೌಲ್ಯ ಇರುವ ಫಲಕಗಳನ್ನ ನೀಡಿ ತಮ್ಮ ಮೌಲ್ಯವನ್ನ ಎಷ್ಟು ಎಂದು ಡಿಮ್ಯಾಂಡ್ ಮಾಡಿ ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಎಲ್ರೂ 20 ಲಕ್ಷ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಸಂಗೀತಾ, ನಾನು ಈ ಮನೆಗೆ ಬಂದು ನನ್ನ ಜರ್ನಿ ಶುರುವಾಗಿದ್ದು ಅಸಮರ್ಥಳಾಗಿ ಎಂದಾಕ್ಷಣ ಪ್ರತಿಯುತ್ತರವಾಗಿ, ವಿನಯ್ ಅಸಮರ್ಥ ಅಂತ ಶುರು ಮಾಡೋದು ಕಾರ್ಡ್ ಪ್ಲೇ ಮಾಡಿದಾಗಿದೆ ಎಂದಿದ್ದಾರೆ. ತನಿಶಾ, ಇದ್ದಿದ್ದು ಇದ್ದಾಗೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಎಂದಿದ್ದಾರೆ. ಇದಕ್ಕೆ ವಿನಯ್​, ಯೋಗ್ಯತೆ ಇದ್ರೆ ನನ್ನ ಎದೆಗೆ ಒದ್ದು ನೋಡು ಎಂದು ರೊಚ್ಚಿಗೆದ್ದಿದ್ದಾರೆ.

ಸದ್ಯ, ಬಿಡುಗಡೆಯಾದ ಪ್ರೋಮೋ ವೈರಲ್​ ಆಗಿದೆ. ಇನ್ನು ಇವತ್ತಿನ ಎಪಿಸೋಡ್​ ತುಂಬಾನೇ ಇನ್​ಟ್ರೆಸ್ಟಿಂಗ್ ಆಗಿದ್ದು, ರಾತ್ರಿ 9 ಗಂಟೆವರೆಗೆ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net