ಗಂಡು ಅಥವಾ ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ? ಪಾಷಾ ಹೇಳಿಕೆ ಕೇಳಿ ಅಧಿಕಾರಿಗಳು ಶಾಕ್​!

Pasha
Published on

ಬೆಂಗಳೂರು: ಮಾದಕ ವಸ್ತು ಜಾಲದ ನಂಟಿನ ಹಿನ್ನೆಲೆಯಲ್ಲಿ ಬಿಗ್​ಬಾಸ್​ ಖ್ಯಾತಿಯ ಆ್ಯಡಮ್​ ಪಾಷಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪಾಷಾರನ್ನು ನ್ಯಾಯಾಂಗ ಬಂಧನಕ್ಕೆ ಕರೆದೊಯ್ದಾಗ ಭಾರಿ ಹೈಡ್ರಾಮ ನಡೆದಿದೆ.

ಜೈಲಿನಲ್ಲಿ ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕೆಂಬ ಗೊಂದಲದ ಜತೆಗೆ ಭಾರಿ ಚರ್ಚೆಯಾಗಿದೆ. ಈ ವೇಳೆ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ, ಯುವತಿಯರ ವಸ್ತ್ರಗಳನ್ನು ಧರಿಸುತ್ತೇನಷ್ಟೆ, ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಎಂದು ಪಾಷಾ ವಾದಾ ಮಾಡಿದ್ದಾರೆ.

ಆದರೆ, ಪಾಷಾರನ್ನು ಗಂಡು ಕೈದಿಗಳ ಸೆಲ್​ಗೆ ಹಾಕೋದಾ? ಅಥವಾ ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ? ಎಂದು ಜೈಲಾಧಿಕಾರಿಗಳು ಕೆಲ ಕಾಲ ಗೊಂದಲಕ್ಕೀಡಾಗಿದ್ದರು. ಮಂಗಳಮುಖಿಯರ ಸೆಲ್​ಗೆ ಹಾಕೋದು ಕೂಡ ಕಷ್ಟವಾಗಿದೆ. ಆ್ಯಡಮ್ ಪಾಷಾ ನಾನು ಮಂಗಳಮುಖಿಯಲ್ಲ ಎಂದು ಹೇಳಿದ್ದಾನೆ.

ಕೊನೆಗೆ ಆ್ಯಡಮ್ ಪಾಷಾನನ್ನು ಪ್ರತ್ಯೇಕ ಸೆಲ್​ನಲ್ಲಿ ಇರಿಸಿರುವುದಾಗಿ ಪರಪ್ಪನ ಅಗ್ರಹಾರ ಜೈಲು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net