ಧಾರವಾಡದಲ್ಲಿ ಭರ್ಜರಿ ಐಟಿ ಬೇಟೆ: ಒಂದೇ ಫ್ಲ್ಯಾಟ್‌ನಲ್ಲಿ ಸಿಕ್ತು 18 ಕೋಟಿ ರೂ.!

it
Published on

ಧಾರವಾಡ: ಲೋಕಸಭೆ ಚುನಾವಣೆಗೂ ಮುನ್ನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಧಾರವಾಡದ ಒಂದೇ ಫ್ಲ್ಯಾಟ್​ನಲ್ಲಿ ಬರೋಬ್ಬರಿ 18 ಕೋಟಿ ರೂ. ಹಣ ಜಪ್ತಿ ಮಾಡಿದೆ. ಲೋಕಸಭಾ ಚುನಾವಣೆ ವೇಳೆ ಈ ದಾಳಿಯು ಹೆಚ್ಚು ಮಹತ್ವ ಪಡೆದಿದೆ.

ಇಲ್ಲಿನ ದಾಸನಕೊಪ್ಪ ಕ್ರಾಸ್‌ ಬಳಿಯ ಅರ್ನಾ ರೆಸಿಡೆನ್ಸಿಯ 3ನೇ ಮಹಡಿಯಲ್ಲಿರುವ ಬಸವರಾಜ್‌ ದತ್ತನವರ್‌ ಎನ್ನುವರ ಪ್ಲಾಟ್‌ ನಂ 303ರ ನಿವಾಸದ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಒಂದಲ್ಲ, ಎರಡಲ್ಲ ಬರೋಬ್ಬರಿ 18 ಕೋಟಿ ಹಣ ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಸಿಕ್ಕಿರುವ ಹಣ ಯಾರದ್ದು, ಇಷ್ಟು ದೊಡ್ಡಮೊತ್ತದ ಎಲ್ಲಿಂದ ಹೇಗೆ ಬಂತು. ಚುನಾವಣಾ ಸಮಯದಲ್ಲಿ ಇಷ್ಟು ಮೊತ್ತ ಶೇಖರಣೆ ಮಾಡಿಕೊಂಡಿದ್ದಾರೆ ಎಂದು ಹಣದ ಮೂಲದ ಬಗ್ಗೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net