ಬನಶಂಕರಿಯಲ್ಲಿ ನಾಳೆ ಬೃಹತ್​ ರಕ್ತದಾನ ಶಿಬಿರ

blood bank
Published on

ಬೆಂಗಳೂರು: ವಿಶ್ವ ರಕ್ತ ದಿನ ನಿಮಿತ್ತ ಲಯನ್ಸ್​ ಕ್ಲಬ್​ ಸಹಭಾಗಿತ್ವದಲ್ಲಿ ಶಿಲ್ಪಾ ಫೌಂಡೇಷನ್​, ಬನಶಂಕರಿ ಎರಡನೇ ಹಂತದ ಬ್ರಿಗೇಡ್​ ಸಾಫ್ಟ್​​​​ವೇರ್​ ಪಾರ್ಕ್​ನಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಬೃಹತ್​ ರಕ್ತದಾನ ಶಿಬಿರ ಆಯೋಜಿಸಿದೆ.

ಐಪಿಎಸ್​ ಅಧಿಕಾರಿ ಶಿವಪ್ರಕಾಶ್​ ದೇವರಾಜು, ಕಿಮ್ಸ್​ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಸಿ.ಭಗವಾನ್​ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ನಟಿ ಆರಾಧ್ಯ ಲಕ್ಷ್ಮಣ್​​, ಶಿಲ್ಪಾ ಫೌಂಡೇಷನ್​ ಸಂಸ್ಥಾಪಕ ಅಚ್ಯುತ್​ ಗೌಡ, ಫಿಡಲಿಟಸ್​ ಎಚ್​ಆರ್​ ಲ್ಯಾಬ್​ನ ನಿರ್ದೇಶಕಿ ಸುಹಾಸಿನಿ ದೇಶಪಾಂಡೆ, ಪರಿಸರ ತಜ್ಞ ಪ್ರಕೃತಿ ಪ್ರಸನ್ನ ಸೇರಿ ಇತರೆ ಗಣ್ಯರು ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net