ವಿಬಿ-ಜಿ ರಾಮ್​ ಜಿ ಗ್ರಾಮೀಣರ ಬದುಕಿಗೆ ಆಸರೆ

ಔರಾದ್​ ತಾಲೂಕಿನ ಧೂಪತ್ಮಹಗಾಂವ ದಲ್ಲಿ ವಿಬಿ&-ಜಿ ರಾಮ್​ ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಕಿರಣ ಪಾಟೀಲ್​ ಭೇಟಿ ನೀಡಿ ಪರಿಶೀಲಿಸಿದರು. ಎಡಿ ಶಿವಕುಮಾರ ಘಾಟೆ, ನಂದಕಿಶೋರ ಶಾಸ್ತ್ರಿ, ಶರಣಪ್ಪ, ಪ್ರಕಾಶ, ಜಗದೇವಿ, ಉಷಾ, ಅಂಬಾದಾಸ ಪಾಟೀಲ್​ ಇತರರಿದ್ದರು.
ಔರಾದ್​ ತಾಲೂಕಿನ ಧೂಪತ್ಮಹಗಾಂವ ದಲ್ಲಿ ವಿಬಿ&-ಜಿ ರಾಮ್​ ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಕಿರಣ ಪಾಟೀಲ್​ ಭೇಟಿ ನೀಡಿ ಪರಿಶೀಲಿಸಿದರು. ಎಡಿ ಶಿವಕುಮಾರ ಘಾಟೆ, ನಂದಕಿಶೋರ ಶಾಸ್ತ್ರಿ, ಶರಣಪ್ಪ, ಪ್ರಕಾಶ, ಜಗದೇವಿ, ಉಷಾ, ಅಂಬಾದಾಸ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಕಿರಣ ಪಾಟೀಲ್​ ಅಭಿಮತ
  • ಧೂಪತ್ಮಹಗಾಂವದಲ್ಲಿ ಕಾಮಗಾರಿ ಪರಿಶೀಲನೆ
ಔರಾದ್​: ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೊಂಡಿರುವ ವಿಬಿ&-ಜಿ ರಾಮ್​ ಜಿ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ್​ ಹೇಳಿದರು.
ತಾಲೂಕಿನ ಧೂಪತ್ಮಹಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ&-ಜಿ ರಾಮ್​ ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಯೋಜನೆಯಡಿ ದಿನಗೂಲಿ ಮೊತ್ತವನ್ನು ರೂ.370ರಿಂದ ರೂ.382ಕ್ಕೆ ಹೆಚ್ಚಿಸಲಾಗಿದೆ. ವಾರ್ಷಿಕ ಉದ್ಯೋಗಾವಕಾಶವನ್ನು 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಲಾಗಿದ್ದು, ಗ್ರಾಮೀಣ ರೋಜ್​ಗಾರ್​ ಗ್ಯಾರಂಟಿ ಕಾರ್ಡ್​ ಹೊಂದಿರುವ ಕುಟುಂಬವು ವರ್ಷಕ್ಕೆ ರೂ.47,750ರವರೆಗೆ ಆದಾಯ ಗಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾ.ಉ) ಶಿವಕುಮಾರ ಘಾಟೆ ಮಾತನಾಡಿ, ವಿಬಿ&ಜಿ ರಾಮ್​ ಜಿ ಯೋಜನೆಯಡಿ 318 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಪ್ರತಿಯೊಬ್ಬ ಅರ್ಹ ಕುಟುಂಬವೂ ಜಾಬ್​ ಕಾರ್ಡ್​ ಹೊಂದಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಬೇಕು. ಗ್ರಾಮಗಳಲ್ಲಿ ಹೆಚ್ಚಿನ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿ ಹೆಚ್ಚಿಸಿ, ಕುಟುಂಬಗಳ ಆರ್ಥಿಕ ಪ್ರಗತಿಗೂ ಒತ್ತು ನೀಡಬೇಕು ಎಂದು ಹೇಳಿದರು.
ಪಿಡಿಒ ನಂದಕಿಶೋರ ಶಾಸ್ತ್ರಿ, ತಾಂತ್ರಿಕ ಸಹಾಯಕ ಶರಣಪ್ಪ, ಡಿಇಒ ಪ್ರಕಾಶ, ಗ್ರಾಮ ಕಾಯಕ ಮಿತ್ರ ಜಗದೇವಿ, ಎಂಬಿಕೆ ಉಷಾ, ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net