ಬೀದರ್: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವೈಜಿನಾಥ ಕಮಠಾಣೆ ಪುನರಾಯ್ಕೆಯಾಗಿದ್ದಾರೆ.
ನಗರದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸಮಿತಿಯ ಐದು ಸದಸ್ಯ ಸ್ಥಾನಗಳಿಗೂ ಆಯ್ಕೆ ಅವಿರೋಧವಾಗಿ ನಡೆಯಿತು.
ವಿವೇಕ್ ದೀಪಕ್ ವಾಲಿ, ವಿಜಯಕುಮಾರ ಗೌರೆ, ಡಾ. ವಿಜಯಕುಮಾರ ಕೋಟೆ, ಸಿ. ಪ್ರಭುರಾಜ ಚಿಂಚೋಳಿ ಹಾಗೂ ಡಾ.ಎಸ್.ಎನ್. ಪ್ರಭಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
ಜಿಲ್ಲಾ ಸಹಾಯಕ ಚುನಾವಣಾಧಿಕಾರಿಯಾಗಿದ್ದ ಶಿವರಾಜ ಕೋಟೆ ಅವರು ಭಾನುವಾರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು.
ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಮಹಾಸಭಾ ಸದಸ್ಯರಾದ ಲಕ್ಷ್ಮೀಬಾಯಿ ಕಮಠಾಣೆ, ಡಾ. ದಿಲೀಪ್ ಕಮಠಾಣೆ, ಧನರಾಜ ಪಾಟೀಲ, ವೈಶಾಲಿ, ಸಂತೋಷ್, ಅಶೋಕ್ ಹಾಗೂ ಇತರರು ಅಭಿನಂದನೆ ತಿಳಿಸಿದ್ದಾರೆ.