ವೈಜಿನಾಥ ಹಾಗೂ ಇಂದುಮತಿ ಮೇತ್ರೆ ದಂಪತಿಗೆ ಐದು ಜನ ಹೆಣ್ಣುಮಕ್ಕಳು. ತಾಯಿ ಇಂದುಮತಿ ಐದು ಜನ ಮಕ್ಕಳೊಂದಿಗೆ ಹೈದರಾಬಾದ್‌ಗೆ ವಲಸೆ ಹೋಗಿ ಕಳೆದ ಐದು ವರ್ಷದಿಂದ ಅಲ್ಲಿಯೇ ನೆಲೆಸಿ ಕೂಲಿ ಮಾಡುತ್ತಿದ್ದರು. ಅಲ್ಲಿನ ನಾರಾಯಣಗುಡ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಜೂ.೮ರಂದು ಮನೆಯಲ್ಲಿ ಊಟ ಮಾಡಿದ ಬಳಿಕ, ಮಾವಿನ ಹಣ್ಣು ಸೇವಿಸಿದ್ದಾರೆ. ಆನಂತರ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥರಾದ ಭವಾನಿ, ಸಂಧ್ಯಾರಾಣಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣವೇನೆಂಬುದು ಗೊತ್ತಾಗಲಿದೆ ಎಂದು ಮೃತರ ಸಂಬAಧಿಕರು ತಿಳಿಸಿದ್ದಾರೆ.