ಬಿಎಸ್​ಎಸ್​ಕೆ ಶೀಘ್ರ ಪುನಶ್ಚೇತನಗೊಳಿಸಿ

ಬಿಎಸ್​ಎಸ್​ಕೆ ಶೀಘ್ರ ಪುನಶ್ಚೇತನಗೊಳಿಸಿ
ಬೀದರ್​ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಮಂಗಳವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ನೇತೃತ್ವದ ನಿಯೋಗ ಸಕ್ಕರೆ ಸಚಿವ ರುದ್ರಪ್ಪ ಲಮಾಣಿಗೆ ಮನವಿ ಸಲ್ಲಿಸಿತು. ಎಂಎಲ್​ಸಿಗಳಾದ ಡಾ.ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​, ಅರವಿಂದಕುಮಾರ ಅರಳಿ, ಶ್ರೀಮಂತರಾವ ಬಿರಾದಾರ, ಸಿದ್ರಾಮಪ್ಪ ಆಣದೂರೆ, ದಯಾನಂದ ಸ್ವಾಮಿ, ರಾಜಶೇಖರ ಹಂದ್ರಾಳೆ, ಅರ್ಜುನ್​ ತಮಗಿಕರ್​, ಗುರುಲಿಂಗಯ್ಯ ಹಾಲಾ ಇತರರಿದ್ದರು.
Published on
Summary

ಸಕ್ಕರೆ ಸಚಿವರಿಗೆ ರಾಜಶೇಖರ ಪಾಟೀಲ್​ ನೇತೃತ್ವದ ನಿಯೋಗ ಮನವಿ

ಹುಮನಾಬಾದ್​: ಬೀದರ್​ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್​ಎಸ್​ಕೆ) ಪುನಶ್ಚೇತನಗೊಳಿಸುವಂತೆ ಒತ್ತಾಯಿಸಿ ಮಾಜಿ ಸಚಿವ ರಾಜಶೇಖರ ಪಾಟೀಲ್​ ನೇತೃತ್ವದಲ್ಲಿ ರೈತರು ಹಾಗೂ ಕಾರ್ಮಿಕರ ನಿಯೋಗ ಮಂಗಳವಾರ ಬೆಂಗಳೂರಿನಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಜಿಲ್ಲೆಯ ರೈತರು ಹಾಗೂ ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಬಿಎಸ್​ಎಸ್​ಕೆ ಸ್ಥಗಿತಗೊಂಡಿರುವುದರಿಂದ ಕಾರ್ಖಾನೆಯನ್ನು ಅವಲಂಬಿಸಿರುವ ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ರಾಜಶೇಖರ ಪಾಟೀಲ್​ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಸಚಿವ ರುದ್ರಪ್ಪ ಲಮಾಣಿ, ಬಿಎಸ್​ಎಸ್​ಕೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ನಂತರ ಬೀದರ್​ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ವಿಧಾನ ಪರಿಷತ್​ ಸದಸ್ಯ ಡಾ. ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​, ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಮಂತರಾವ ಬಿರಾದಾರ, ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಬಿಎಸ್​ಎಸ್​ಕೆ ಕಾರ್ಮಿಕರಾದ ರಾಜಶೇಖರ ಹಂದ್ರಾಳೆ, ಅರ್ಜುನ್​ ತಮಗಿಕರ್​, ಗುರುಲಿಂಗಯ್ಯ ಹಾಲಾ, ಝರ್ನಾರಡ್ಡಿ, ರಾಜು ಪಾಟೀಲ್​, ಮಲ್ಲಿಕಾರ್ಜುನ ಭಂಡಾರಿ, ಶಿವಕುಮಾರ ಚಳಕಾಪುರೆ, ಝರನು ಕಾವಲೆ, ಜಾನ್ಸನ್​ ಇತರರಿದ್ದರು.

ಲೀಜ್​ಗೆ ನೀಡಿ ಮರು ಆರಂಭಿಸಲು ಪ್ರಯತ್ನ

ಬಿಎಸ್​ಎಸ್​ಕೆ ಹರಾಜು ಪ್ರಕ್ರಿಯೆ ತಡೆಯುವಂತೆ ಮಾಜಿ ಸಚಿವ ರಾಜಶೇಖರ ಪಾಟೀಲ್​ ಹಲವು ಬಾರಿ ಒತ್ತಾಯಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮಕೈಗೊಂಡು ಕಾರ್ಖಾನೆಯನ್ನು ಲೀಜ್​ಗೆ ನೀಡಿ ಮರು ಆರಂಭಿಸುವ ಮೂಲಕ ರೈತರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದ್ದಾರೆ ಎಂದು ನಿಯೋಗದ ಮುಖಂಡರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net