ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

ಬೀದರ್​ನ ಜಿಪಂನಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಮೃತರಾವ ಚಿಮಕೋಡೆ ಮಾತನಾಡಿದರು. ಡಾ.ಗಿರೀಶ್​ ಬದೋಲೆ, ಕಿಶೋರ ದುಬೆ ಇದ್ದರು.
ಬೀದರ್​ನ ಜಿಪಂನಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಮೃತರಾವ ಚಿಮಕೋಡೆ ಮಾತನಾಡಿದರು. ಡಾ.ಗಿರೀಶ್​ ಬದೋಲೆ, ಕಿಶೋರ ದುಬೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಮೃತರಾವ ಚಿಮಕೋಡೆ ಸೂಚನೆ
  • ಬೀದರ್​ನಲ್ಲಿ ಪ್ರಗತಿ ಪರಿಶೀಲನೆ ಸಭೆ
ಬೀದರ್​: ಎಪ್ಪತೆದು (75) ವರ್ಷ ಮೇಲ್ಪಟ್ಟ ಹಿರಿಯ ಪಡಿತರ ಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ಧಾನ್ಯ ವಿತರಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯ ಅಮೃತರಾವ ಚಿಮಕೊಡೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪಡಿತರ ತರಲು ತೊಂದರೆಯಾಗುತ್ತಿದ್ದ ಕಾರಣ ಸರ್ಕಾರ ಮನೆ ಬಾಗಿಲಿಗೆ ಪಡಿತರ ವಿತರಿಸುವ ಯೋಜನೆ ಜಾರಿಗೊಳಿಸಿದೆ ಎಂದರು.
ಬೇಸಿಗೆ ಕಾಲ ಇರುವುದರಿಂದ ಪಡಿತರ ಧಾನ್ಯ ವಿತರಕರು ತಮ್ಮ ಅಂಗಡಿಗಳ ಮುಂದೆ ಲಾನುಭವಿಗಳಿಗೆ ತೊಂದರೆ ಆಗದಂತೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಲಾನುಭವಿಗಳಿಗೆ ತಲುಪುವಂತಾಗಬೇಕು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 13,13,305 ಲಾನುಭವಿಗಳಿದ್ದು, 3,57,286 ಪಡಿತರ ಚೀಟಿಗಳಿವೆ. ಅಂತ್ಯೋದಯ ಮತ್ತು ಬಿಪಿಎಲ್​ ಆದ್ಯತಾ ಪಡಿತರ ಚೀಟಿದಾರರಿಗೆ 1.18 ಲ ಕ್ವಿಂಟಾಲ್​ ಅಕ್ಕಿ ವಿತರಿಸಲಾಗುತ್ತಿದೆ. 2025ರ ಅಕ್ಟೋಬರ್​ವರೆಗೆ ಪ್ರತಿ ತಿಂಗಳು ಒಬ್ಬರಿಗೆ 10 ಕೆಜಿ ಅಕ್ಕಿ ವಿತರಿಸಲಾಗಿದೆ. ಪ್ರತಿ ತಿಂಗಳು ಮೃತ ಲಾನುಭವಿಗಳನ್ನು ಪರಿಶೀಲಿಸುತ್ತಿದ್ದು, ಈವರೆಗೆ 5004 ಜನ ಮೃತರ ಪಡಿತರ ಕಾರ್ಡ್​ ರದ್ದುಗೊಳಿಸಲಾಗಿದೆ. ಇದರಿಂದ 500 ಕ್ವಿಂಟಾಲ್​ ಅಕ್ಕಿ ಉಳಿತಾಯವಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 3,29,734 ಲಾನುಭವಿಗಳಿದ್ದು, 1751.40 ಕೋಟಿ ರೂ. ಲಾನುಭವಿಗಳಿಗೆ ಡಿಬಿಟಿ ಮುಖಾಂತರ ಅವರ ಖಾತೆಗೆ ಜಮಾ ಮಾಡಲಾಗಿದೆ. ಮೃತ ವ್ಯಕ್ತಿಗಳ ಪರಿಷರಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 5353 ಮೃತ ಲಾನುಭವಿಗಳಿದ್ದು, ಮರಣ ಹೊಂದಿದ ಲಾನುಭವಿಗಳ ಸೇವಾ ಸಿಂಧು ಲಾಗಿನ್​ನಲ್ಲಿ ಈವರೆಗೆ 2004 ಲಾನುಭವಿಗಳ ಅಪ್​ಡೇಟ್​ ಮಾಡಲಾಗಿದೆ. 3349 ಲಾನುಭವಿಗಳು ಮರಣ ಹೊಂದಿರುವ ಲಾನುಭವಿಗಳ ಸೇವಾ ಸಿಂಧು ಲಾಗಿನಲ್ಲಿ ಅಪ್​ಡೇಟ್​ ಮಾಡಬೇಕಾಗಿದೆ. ಈಗಾಗಲೇ ಡಿಸೆಂಬರ್​ವರೆಗೆ ಗೃಹಲಕ್ಷ್ಮಿ ಹಣ ಪಾವತಿಸಲಾಗಿದ್ದು, ಜನವರಿ ತಿಂಗಳ ಮೊತ್ತ 2000 ರೂ. ಮೂರ್ನಾಲ್ಕು ದಿನಗಳಲ್ಲಿ ಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್​ ಬದೋಲೆ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯ ಉದಯಕುಮಾರ ವಾರದ್​, ಜಿಪಂ ಮುಖ್ಯ ಯೋಜನಾಧಿಕಾರಿ ಕಿಶೋರ ದುಬೆ, ಆಹಾರ ಇಲಾಖೆಯ ಉಪ ನಿರ್ದೇಶಕ ಪ್ರವಿಣ ಬರಗಲ್​, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಧರ ಸೇರಿದಂತೆ ಗ್ಯಾರಂಟಿ ಯೋಜನೆಯ ಉಪಾಧ್ಯರು, ತಾಲೂಕಾಧ್ಯರು, ಸದಸ್ಯರು ಹಾಗೂ ಇನಿತರ ಇಲಾಖೆ ಅಧಿಕಾರಿಗಳು ಇದ್ದರು.
ಪ್ರತಿ ದಿನ 1.16 ಲ ಸ್ತ್ರೀಯರು ಪ್ರಯಾಣ
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 1.16 ಲ ಮಹಿಳೆಯರು ಪ್ರಯಾಣಿಸುತ್ತಿದ್ದು, ಈವರೆಗೆ 3,45.88 ಕೋಟಿ ರೂ. ಸಂಬಂಧಿಸಿದ ಸಾರಿಗೆ ನಿಗಮಕ್ಕೆ ಸಂದಾಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯ ಅಮೃತರಾವ ಚಿಮಕೊಡೆ ಹೇಳಿದರು. 2023ರ ಜೂನ್​ 11ರಿಂದ ಈವರೆಗೆ ಮಹಿಳಾ ಮತ್ತು ಬಾಲಕಿಯರು ಒಟ್ಟು ಸೇರಿ 11.70 ಕೋಟಿ ಜನರು ಈ ಸೌಲಭ್ಯವನ್ನು ಪಡೆದಿದ್ದಾರೆ ಎಂದರು. ಗೃಹಜ್ಯೋತಿ ಯೋಜನೆಯಡಿ 3,29,750 ಲಾನುಭವಿಗಳಿದ್ದು, ಫೆಬ್ರವರಿ ಅಂತ್ಯದವರಗೆ 495.80 ಕೋಟಿ ರೂ. ಇಲಾಖೆಗೆ ಹಣ ಸಂದಾಯವಾಗಿದೆ. ಯುವನಿಧಿ ಯೋಜನೆಯಡಿಯಲ್ಲಿ ಪದವಿ 16188, ಡಿಪ್ಲೊಮಾ 408 ಲಾನುಭವಿಗಳು ಸೇರಿ ಒಟ್ಟು 16,596 ವಿದ್ಯಾರ್ಥಿಗಳಿಗೆ 40.99 ಕೋಟಿ ರೂ. ಅವರ ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡಲಾಗಿದೆ ಎಂದರು.
"

ಸದ್ಯ ವಿವಿಧ ಪರೀೆಗಳು ನಡೆಯುತ್ತಿದ್ದು, ಬಸ್​ಗಳು ಸರಿಯಾದ ಸಮಯಕ್ಕೆ ಓಡಿಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳಲ್ಲಿ ಪ್ರತಿ ತಿಂಗಳು ಮೃತ ಲಾನುಭವಿಗಳ ಕುರಿತು ಪರಿಷರಣೆ ಮಾಡಬೇಕು.

> ಡಾ.ಗಿರೀಶ್​ ಬದೋಲೆ

ಜಿಲ್ಲಾ ಪಂಚಾಯಿತಿ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net