ರಹೀಂಖಾನ್‍ಗೆ ಸಚಿವ ಸ್ಥಾನ ಕೊಡಿ

ಬೀದರ್ ಶಾಸಕ ರಹೀಂಖಾನ್ ಅವರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಹೀಂಖಾನ್ ಅವರ ಬೆಂಬಲಿಗರು ಬೀದರ್‍ನಲ್ಲಿ ಮೆರವಣಿಗೆ ನಡೆಸಿದರು
ಬೀದರ್ ಶಾಸಕ ರಹೀಂಖಾನ್ ಅವರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಹೀಂಖಾನ್ ಅವರ ಬೆಂಬಲಿಗರು ಬೀದರ್‍ನಲ್ಲಿ ಮೆರವಣಿಗೆ ನಡೆಸಿದರು
Published on
ಬೀದರ್:
ಮಾಜಿ ಸಚಿವರೂ ಆದ ಬೀದರ್ ಶಾಸಕ ರಹೀಂಖಾನ್ ಅವರಿಗೆ ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಹೀಂಖಾನ್ ಅವರ ಬೆಂಬಲಿಗರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಸಮೀಪದ ಪ್ರವಾಸಿ ಮಂದಿರದಿಂದ ಘೋಷಣೆ ಕೂಗುತ್ತ ಮೆರವಣಿಯಲ್ಲಿ ಅಂಬೇಡ್ಕರ್ ವೃತ್ತಕ್ಕೆ ಬಂದರು.
ರಹೀಂಖಾನ್ ಅವರ ಭಾವಚಿತ್ರ ಹಾಗೂ 'ರಹೀಂಖಾನ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿ' ಎಂಬ ಬರಹ ಹೊಂದಿದ್ದ ಫಲಕಗಳನ್ನು ಕೈಯಲ್ಲಿ ಹಿಡಿದಿದ್ದರು.
ರಹೀಂಖಾನ್ ಅವರು ನಾಲ್ಕು ಸಲ ಶಾಸಕ ಹಾಗೂ ಎರಡು ಬಾರಿ ಸಚಿವರಾಗಿ ಬೀದರ್ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮಗೆ ವಹಿಸಿಕೊಟ್ಟ ಇಲಾಖೆಗಳಿಗೆ ಹೊಸ ಕಾಯಕಲ್ಪ ಕಲ್ಪಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳಿದರು.
ರಹೀಂಖಾನ್ ಅವರು ಎಲ್ಲ ಜಾತಿ, ವರ್ಗಗಳ ಜನರ ನೆಚ್ಚಿನ ನಾಯಕರಾಗಿದ್ದಾರೆ. ಜನ ಪರ ಕಾಳಜಿ ಹೊಂದಿದ್ದಾರೆ. ಹೀಗಾಗಿ ಜನರ ಕಲ್ಯಾಣ ಹಾಗೂ ರಾಜ್ಯ ಏಳಿಗೆಗಾಗಿ ಅವರಿಗೆ ಸಚಿವ ಹುದ್ದೆ ಕೊಡಬೇಕು ಎಂದು ಬೇಡಿಕೆ ಮಂಡಿಸಿದರು.
ತೇಜಮ್ಮ ಶಹಾಪುರಗೇಟ್, ಲಕ್ಷ್ಮಿ ಬಾವಿದೊಡ್ಡಿ, ಪ್ರೇಮಾ ಚಿಕ್ಕಪೇಟೆ, ಜ್ಯೋತಿ, ನಾಗಮ್ಮ, ತುಕಾರಾಮ ಚಿದ್ರಿ, ರಾಜು ಚಿದ್ರಿ, ಅಕ್ಷಯ್ ಚಿಮಕೋಡ್, ವೈಜಿನಾಥ, ಮತೀನ್, ಮಹೇಂದರ್ ಹೊಸಮನಿ ಮತ್ತಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net