ದೇಶವು ಅನೇಕ ಪ್ರಧಾನಿಗಳನ್ನು ಕಂಡಿದೆ. ಆದರೆ ಸಾಮಾನ್ಯ ನಾಗರಿಕರೊಂದಿಗೆ ಪ್ರತಿ ತಿಂಗಳು ಮನ್ ಕಿ ಬಾತ್ ಮೂಲಕ ನೇರ ಸಂವಾದ ನಡೆಸುವ ಪರಂಪರೆ ಆರಂಭಿಸಿದ ಏಕೈಕ ಪ್ರಧಾನಿ ಮೋದಿ. ಈ ಕಾರ್ಯಕ್ರಮದ ಮೂಲಕ ದೇಶದ ವಿವಿಧೆಡೆ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಜತೆಗೆ ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ, ಮಹಿಳಾ ಸಬಲೀಕರಣ, ಆತ್ಮನಿರ್ಭರ ಭಾರತ, ಶಿಕ್ಷಣ, ಆರೋಗ್ಯ, ಕೃಷಿ, ಯುವಶಕ್ತಿ, ನವೋದ್ಯಮ ಹಾಗೂ ರಾಷ್ಟ್ರ ನಿಮರ್ಾಣದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯಂತಹ ಮಹತ್ವದ ವಿಷಯಗಳ ಕುರಿತು ಮೋದಿ ಅವರು ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.