ಚವ್ಹಾಣ್ ಅವರ ಜನ್ಮಸ್ಥಳ, ವಿದ್ಯಾಭ್ಯಾಸ, ಎಸ್‌ಸಿ ಜಾತಿ ಪ್ರಮಾಣಪತ್ರ ಸ್ವೀಕಾರ, ಮತದಾರ ಪಟ್ಟಿಯಲ್ಲಿನ ಹೆಸರು ಹೀಗೆ ಎಲ್ಲ ಪರಿಶೀಲನೆ ವೇಳೆ ಇವರು ಸ್ಥಳೀಯರು ಹಾಗೂ ಲಂಬಾಣಿ ಎಸ್‌ಸಿ ಸಮಾಜದವರು ಎಂದು ಸ್ಪಷ್ಟವಾಗಿದೆ. ಸಮಾಜ ಕಲ್ಯಾಣ, ಕಂದಾಯ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ, ಡಿಸಿ ನ್ಯಾಯಾಲಯ ಸಹ ಇದನ್ನು ಸ್ಪಷ್ಟಪಡಿಸಿವೆ. ಹೈಕೋರ್ಟ್ ನಲ್ಲಿನ ತೀರ್ಪು ಸಹ ಚವ್ಹಾಣ್ ಪರವಾಗಿ ಬಂದಿವೆ. ಹೈಕೋರ್ಟ್ ನೀಡಿದ ಸುದೀರ್ಘ ವಿವರವುಳ್ಳ ಆದೇಶದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ ಎಂದು ಕಡಕ್ ಆದೇಶ ನೀಡಿ ಅರ್ಜಿ ವಜಾಗೊಳಿಸಿದೆ.