ಲಿಂಗಾಯತರ ರಾಷ್ಟ್ರ ನಿಷ್ಠೆ ಪ್ರಶ್ನಿಸುವಂತಿಲ್ಲ

ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ ಡಾ.ಉಲ್ಕಾ ಡಾ.ಮಲ್ಲಿಕಾರ್ಜುನ ರಗಟೆ, ರಮೇಶ ಮೋರ್ಗೆ ಹಾಗೂ ಸೋಮಶಂಕರ ಕಾರಾಮುಂಗೆ ದಂಪತಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಕೋರಣೇಶ್ವರ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಬಾಬು ಹೊನ್ನಾನಾಯಕ, ಧನರಾಜ ತಾಳಂಪಳ್ಳಿ, ಬಸವರಾಜ ಧನ್ನೂರ, ಶಶಿಕಾಂತ ದುರ್ಗೆ, ಶಿವರಾಜ ನರಶೆಟ್ಟಿ, ಡಾ.ಚಂದ್ರಕಾಂತ ಗುದಗೆ, ಹರೀಶ ಸುಮೈರ್, ಮಹಾದೇವ ಪಾಟೀಲ್ ಇತರರಿದ್ದರು.
ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ ಡಾ.ಉಲ್ಕಾ ಡಾ.ಮಲ್ಲಿಕಾರ್ಜುನ ರಗಟೆ, ರಮೇಶ ಮೋರ್ಗೆ ಹಾಗೂ ಸೋಮಶಂಕರ ಕಾರಾಮುಂಗೆ ದಂಪತಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಕೋರಣೇಶ್ವರ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಬಾಬು ಹೊನ್ನಾನಾಯಕ, ಧನರಾಜ ತಾಳಂಪಳ್ಳಿ, ಬಸವರಾಜ ಧನ್ನೂರ, ಶಶಿಕಾಂತ ದುರ್ಗೆ, ಶಿವರಾಜ ನರಶೆಟ್ಟಿ, ಡಾ.ಚಂದ್ರಕಾಂತ ಗುದಗೆ, ಹರೀಶ ಸುಮೈರ್, ಮಹಾದೇವ ಪಾಟೀಲ್ ಇತರರಿದ್ದರು.
Published on
ಬಸವಕಲ್ಯಾಣ: ರಾಷ್ಟ್ರೀಯತೆ, ದೇಶಭಕ್ತಿ ಲಿಂಗಾಯತ ರಕ್ತದಲ್ಲಿ ಬಂದಿದೆ. ಅವರ ರಾಷ್ಟ್ರ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಹಂದಿಗುಂದನ ಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಅನುಭವ ಮಂಟಪ ಪರಿಸರದಲ್ಲಿ ೪೬ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ ಎರಡನೇ ದಿನವಾದ ಭಾನುವಾರ ಆಯೋಜಿಸಿದ್ದ ಲಿಂಗಾಯತ ಹೋರಾಟ ಮತ್ತು ರಾಷ್ಟ್ರೀಯತೆ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ಪೂಜ್ಯರು, ಲಿಂಗಾಯತ ಹೋರಾಟ ಯಾವುದೇ ಧರ್ಮ, ಪಕ್ಷ, ವ್ಯಕ್ತಿಗಳ ವಿರೋಧವಲ್ಲ. ಇದು ಎಲ್ಲರನ್ನು ಒಳಗೊಂಡಿರುವ ಹೋರಾಟವಾಗಿದೆ. ಲಿಂಗಾಯತ ಹೋರಾಟವನ್ನು ದೇಶ ವಿರೋಧಿ ಚಳವಳಿ ಎಂದು ಬಿಂಬಿಸಲು ಕೆಲವರು ಹೊನ್ನಾರ ನಡೆಸಿದರು. ಇದು ಫಲಿಸುವುದಿಲ್ಲ ಎಂದರು.
ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ಅಳಿಸಿ, ಎಲ್ಲರನ್ನು ಒಗ್ಗೂಡಿಸಿ ಸರ್ವ ಸಮಾನತೆಯ ಆಧಾರದಲ್ಲಿ ಲಿಂಗಾಯತ ಧರ್ಮ ನೀಡಿದ್ದಾರೆ. ಇದು ರಾಷ್ಟ್ರ ಕಟ್ಟುವಲ್ಲಿ ದೊಡ್ಡ ಮೈಲಿಗಲ್ಲು. ಬಸವಣ್ಣನವರ ಅನುಭಾವ, ಪ್ರಜಾಪ್ರಭುತ್ವದ ವಿಚಾರಧಾರೆ ಒಪ್ಪಿಕೊಳ್ಳುವ ಎಲ್ಲರೂ ಲಿಂಗಾಯತ ಧರ್ಮ ಏಕೆ ಒಪ್ಪಿಕೊಳ್ಳುವದಿಲ್ಲ ಎಂದು ಪ್ರಶ್ನಿಸಿದರು.
ಆಳಂದನ ಶ್ರೀ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮ ಸ್ವಾತಂತ್ರ ಧರ್ಮ. ಎಲ್ಲರನ್ನು ಒಪ್ಪಿಕೊಳ್ಳುವ, ಎಲ್ಲರ ಲೇಸನ್ನೇ ಬಯಸುವ ರಾಷ್ಟçವಾದ ನಮ್ಮದು. ಸಂವಿಧಾನವನ್ನು ಗೌರವಿಸುವ ಎಲ್ಲರೂ ಲಿಂಗಾಯತ ಧರ್ಮದ ವಿಚಾರಗಳನ್ನು ಒಪ್ಪಿಕೊಳ್ಳಬೇಕು ಎಂದರು.
ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಹೋರಾಟ ಪ್ರಾರಂಭವಾಗಿದ್ದು ೧೨ನೆಯ ಶತಮಾನದಲ್ಲಿ. ಲಿಂಗಾಯತ ಧರ್ಮದ ಮೇಲೆ ಅಂದಿನಿಂದಲೂ ಅನೇಕ ದಾಳಿಗಳು ಆಗುತ್ತಲಿವೆ. ಆದರೆ, ಆ ದಾಳಿಗಳನ್ನು ಎದುರಿಸುವ ಶಕ್ತಿ ಲಿಂಗಾಯತ ತತ್ವದಲ್ಲಿ ಅಡಗಿದೆ. ಲಿಂಗಾಯತರಲ್ಲಿ ದೇಶ ಪ್ರೇಮ ತುಂಬಿಕೊಂಡಿದೆ. ದೇಶದ ಅಖಂಡತೆಗಾಗಿ ಲಿಂಗಾಯತರು ಮಾಡಿರುವ ತ್ಯಾಗ, ಬಲಿದಾನದ ಇತಿಹಾಸ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಗುರುಮಠಕಲ್‌ನ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಹೋರಾಟ ಸರ್ವಸಾಮಾನ್ಯರಿಗೂ ಬಸವಾದಿ ಶರಣರ ತತ್ವಾದರ್ಶಗಳ ಕುರಿತು ಜಾಗೃತ ಮೂಡಿಸುವ ಹೋರಾಟವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ ಉಪಾಧ್ಯಕ್ಷ ಬಸವರಾಜ ಧನ್ನೂರು ಮಾತನಾಡಿದರು. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಶ್ರೀ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಕಾಡಾ ಅಧ್ಯಕ್ಷ ಬಾಬುಹೊನ್ನಾನಾಯಕ್, ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಡಾ.ತೃಪ್ತಿ ಕರಿಕಟ್ಟಿ ಕೋಲ್ಹಾಪುರ, ಮಹಾದೇವಪ್ಪ ಇಜಾರೆ, ಸೋಮನಾಥ ಜಾಂತೆ, ಪನ್ನರಾಜ್ ಬಳ್ಳಾರಿ, ನಿಷ್ಠಿ ರುದ್ರಪ್ಪ ಬಳ್ಳಾರಿ, ರವಿಶಂಕರ ಬಳ್ಳಾರಿ, ಎಸ್.ಬಸವರಾಜ ಮಾವಿನಹಳ್ಳಿ ವಿಜಯಪುರ, ಡಾ.ಮಹಾಬಳೇಶ್ವರರಡ್ಡಿ ವಿಜಯನಗರ, ಹನುಮೇಶ ಕಲ್ಮಂಗಿ ಕೊಪ್ಪಳ, ಸೌಮ್ಯ ವಿಜಯ ನಾಲ್ವಾಡ ಕೊಪ್ಪಳ, ರುದ್ರಪ್ಪ ಪಿ. ರಾಯಚೂರು, ನಾಗನಗೌಡರು ಹರ್ವಿ ರಾಯಚೂರು, ಚನ್ನಬಸವಣ್ಣ ರಾಯಚೂರು ಇತರರಿದ್ದರು. ಡಾ.ಸಂಗೀತಾ ರಮೇಶ ಮಂಠಾಳೆ ನಿರೂಪಣೆ ಮಾಡಿದರು. ವೀರಭದ್ರಪ್ಪ ಬಸವಕಲ್ಯಾಣ ವಂದಿಸಿದರು. ರಾಜಕುಮಾರ ಹೂಗಾರ ಹಾಗೂ ರಾಮಚಂದ್ರ ಹಲ್ಲಹಿಪ್ಪರ್ಗಿ ಅವರಿಂದ ವಚನ ಸಂಗೀತ ಜರುಗಿತು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ವಚನ ನೃತ್ಯ ಗಮನ ಸೆಳೆಯಿತು.
ಪರುಷಕಟ್ಟೆ ಜೀರ್ಣೋದ್ಧಾರಗೊಳಿಸಿ: ನೂತನ ಅನುಭವ ಮಂಟಪ ಕಾಮಗಾರಿ ಪ್ರಗತಿಯಲ್ಲಿದ್ದು, ೨೦೨೬ರ ಡಿಸೆಂಬರ್ ಒಳಗಾಗಿ ಲೋಕಾರ್ಪಣೆಗೊಳುತ್ತಿರುವುದು ಸಂತಸ ತಂದಿದೆ. ಆದರೆಮ ಇಲ್ಲಿನ ಪರುಷಕಟ್ಟೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದನ್ನು ಜೀರ್ಣೋದ್ಧಾರ ಕಾಮಗಾರಿಗೆ ಆರಂಭಿಸಿ, ಅನುಭವ ಮಂಟಪದ ಜತೆಯಲ್ಲಿಯೇ ಲೋಕಾರ್ಪಣೆ ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು. ರಾಷ್ಟ್ರೀಯತೆಗೆ ಅನುಭವ ಮಂಟಪವೇ ಸಾಕ್ಷಿ. ಆರ್‌ಎಸ್‌ಎಸ್ ಬಗ್ಗೆ ಟೀಕಿಸುವ ಬದಲು ಲಿಂಗಾಯತ ಧರ್ಮ, ವಚನ ಸಾಹಿತ್ಯದ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯಬೇಕು. ಧರ್ಮ, ಹೋರಾಟ ತತ್ವ, ಸಿದ್ಧಾಂತದ ವಿರುದ್ಧ ಹೇಳಿಕೆ ನೀಡಿದರೆ ವಿರೊಧೀಸದೆ ಸುಮ್ಮನಿರುವುದು ಸರಿಯಲ್ಲ ಎಂದರು.
ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದ್ಯಕೀಯ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಉಲ್ಕಾ ಡಾ.ಮಲ್ಲಿಕಾರ್ಜುನ ರಗಟೆ ಅವರಿಗೆ ವೈದ್ಯ ಸಂಗಣ್ಣ ಪ್ರಶಸ್ತಿ, ಸಾವಯವ ಕೃಷಿಕರಾದ ರಮೇಶ ಮೋರ್ಗೆ ಅವರಿಗೆ ಒಕ್ಕಲಿಗ ಮುದ್ದಣ್ಣ ಸಾವಯವ ಪ್ರಶಶ್ತಿ-೨೦೨೪ ಹಾಗೂ ಸೋಮಶಂಕರ ಕಾರಾಮುಂಗೆ ಅವರಿಗೆ ೨೦೨೫ರ ಒಕ್ಕಲಿಗ ಮುದ್ದಣ್ಣ ಸಾವಯವ ಕೃಷಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಹರೀಶ ಸುಮೈರ್, ಡಾ.ಚಂದ್ರಕಾAತ ಗುದಗೆ, ಮಹಾದೇವ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಸಾಮೂಹಿಕ ಇಷ್ಟಲಿಂಗ ಪೂಜೆ: ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಿಮಿತ್ತ ಸಾಮೂಹಿಕ ಇಷ್ಟಲಿಂಗ ಪೂಜಾ ಮತ್ತು ನಗೆಯೋಗ ಕೂಟ ಭಾನುವಾರ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾಗಿತ್ತು. ಶ್ರಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸು ಶುದ್ಧವಾಗುತ್ತದೆ. ಎಲ್ಲರೂ ಪ್ರತಿ ದಿನ ಮನೆಯಲ್ಲಿ ಬೆಳಗ್ಗೆ ಎದ್ದು ಸ್ನಾನ ಮಾಡಿಕೊಂಡು ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದು ಪೂಜ್ಯರು ಹೇಳಿದರು. ಶ್ರೀ ಮಹಾಲಿಂಗ ಸ್ವಾಮಿ, ಶ್ರೀ ಬಸವಭೂಷಣ ಸ್ವಾಮಿ, ಶ್ರೀ ಶಿವಾನಂದ ಸ್ವಾಮಿ, ಶ್ರೀ ಮಹಾಲಿಂಗ ಸ್ವಾಮಿ, ಶ್ರೀ ಗಂಗಾಧರ ದೇವರು, ಶ್ರೀ ಗೋಣಿರುದ್ರ ಸ್ವಾಮಿ, ಶ್ರೀ ಬಸವಲಿಂಗ ಸ್ವಾಮಿ, ಶ್ರೀ ಶಂಕರಲಿಂಗ ಸ್ವಾಮಿ, ಶ್ರೀ ಪ್ರಭುಲಿಂಗ ಸ್ವಾಮಿ, ಶ್ರೀ ಶಿವಬಸವ, ಶ್ರೀ ಬಸವರಾಜ ಶರಣರು, ಶ್ರೀ ಬಸವ ದೇವರು, ಶ್ರೀ ಅನೀಲ ಮಹಾರಾಜರು, ಮಾತೆ ಮೈತ್ರಾದೇವಿ, ಮಾತೆ ಡಾ.ಮಹಾದೇವಮ್ಮ ತಾಯಿ, ಮಾತೆ ಸುಗುಣಾದೇವಿ, ಮಾತೆ ಅಕ್ಕನಾಗಮ್ಮತಾಯಿ, ಮಾತೆ ಕಮಲಮ್ಮ, ಮಾತೆ ಸತ್ಯಕ್ಕ, ಮಾತೆ ಪ್ರಭಾವತಿ, ಮಾತೆ ನೀಲಾಂಬಿಕಾ, ಮಾತೆ ಶರಣಾಂಬಿಕಾ, ಮಾತೆ ಗುರುದೇವಿ, ಮಾತೆ ಸತ್ಯದೇವಿ, ಮಾತೆ ಕಲ್ಯಾಣಮ್ಮ, ಮಾತೆ ಲಲಿತಮ್ಮ, ಮಾತೆ ದೇವಮ್ಮ, ಮಾತೆ ಕಮಲಮ್ಮ, ಮಾತೆ ದಾನೇಶ್ವರಿ ಇತರರಿದ್ದರು. ಪಾಪನಾಶ ನಗೆಯೋಗ ಕೂಟದ ಅಧ್ಯಕ್ಷ ಸಿದ್ಧಯ್ಯ ಕಾವಡಿಮಠ ಮತ್ತು ಸಂಗಡಿಗರಿAದ ನಡೆದ ನಗೆಯೋಗ ಗಮನ ಸೆಳೆಯಿತು. ಸುಲೋಚನಾ ಶಿವಶರಣಪ್ಪ ಮಾಮಾ, ಸುಲೋಚನಾ ಬಸವರಾಜ ಕಾಮಶೆಟ್ಟಿ, ಸುಲೋಚನಾ ಶಿವಬಸಪ್ಪ ಗುದಗೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net