ಯುವಕರು ಸಾಧಕರಾಗಲು ಪ್ರಯತ್ನಿಸಲಿ

ಬೀದರ್​ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಸಚಿನ್​ ಮಲ್ಕಾಪುರೆ ಉದ್ಘಾಟಿಸಿದರು. ಪ್ರೊ.ಶಂಕರ ಗಣಗೊಂಡ, ಡಾ.ರಾಜಕುಮಾರ ಅಲ್ಲೂರೆ, ಡಾ.ಪಲ್ಲೆದ್​ ಮಹೇಶ್ವರಿ ಇತರರಿದ್ದರು.
ಬೀದರ್​ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಸಚಿನ್​ ಮಲ್ಕಾಪುರೆ ಉದ್ಘಾಟಿಸಿದರು. ಪ್ರೊ.ಶಂಕರ ಗಣಗೊಂಡ, ಡಾ.ರಾಜಕುಮಾರ ಅಲ್ಲೂರೆ, ಡಾ.ಪಲ್ಲೆದ್​ ಮಹೇಶ್ವರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿನ್​ ಮಲ್ಕಾಪುರೆ ಕರೆ
  • ಬೀದರ್​ನಲ್ಲಿ ಎನ್​ಎಸ್​ಎಸ್​ ಶಿಬಿರ
ಬೀದರ್​: ಯುವಜನರು ಪರಿಶ್ರಮ ವಹಿಸಿ ಸಾಧಕರಾಗಲು ಪ್ರಯತ್ನಿಸಬೇಕು. ಈ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಬೀದರ್​ ವಿಶ್ವವಿದ್ಯಾಲಯದ ಸಿಂಡಿಕೇಟ್​ ಸದಸ್ಯ ಸಚಿನ್​ ಮಲ್ಕಾಪುರೆ ಹೇಳಿದರು.
ನಗರದ ನೌಬಾದ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮಹಾನ್​ ನಾಯಕರ ಜೀವನ ಚರಿತ್ರೆ ಓದಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಾ.ರಾಜಕುಮಾರ ಅಲ್ಲೂರೆ ಮಾತನಾಡಿ, ಶಿಬಿರಾರ್ಥಿಗಳು ಗ್ರಾಮೀಣ ಜನರಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಗ್ರಾಮೀಣ ಅಭಿವೃದ್ಧಿ, ಪರಿಸರ ಸಂರಣೆ ಹಾಗೂ ಶಿಕ್ಷಣದ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಡಾ.ಪಲ್ಲೇದ್​ ಮಹೇಶ್ವರಿ ಮಾತನಾಡಿ, ಶಿಬಿರಾರ್ಥಿಗಳು ಜನರ ಸೇವೆಯನ್ನೇ ದೇವರ ಸೇವೆಯೆಂದು ಭಾವಿಸಬೇಕು. ಹೊಸ ಯೋಜನೆಗಳ ಮೂಲಕ ಗ್ರಾಮಗಳ ಉದ್ಧಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಶಂಕರ ಗಣಗೊಂಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದು, ಸುಶಿತರಾಗಬೇಕು. ದೇಶದ ಅಭಿವದ್ಧಿಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಶಿಬಿರದ ನಿರ್ದೇಶಕ ಡಾ.ಸುಚಿತಾನಂದ ಕೆ. ಮಲ್ಕಾಪುರೆ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಡಾ.ಶಿವಕುಮಾರ, ಡಾ.ಶೀಲಾ, ಡಾ.ಅಶೋಕ ಕೋರೆ, ಡಾ.ನಗ್ಮಾ, ಡಾ.ಸಪ್ನಾ, ಡಾ.ಸುನೀಲಕುಮಾರ ಮೂಲಗೆ, ಡಾ.ಸಂತೋಷ್​ ಹಂಗರಗಿ, ಅರುಣಕುಮಾರ, ಡಾ.ಈಶ್ವರಯ್ಯ ಕೂಡಂಬಲ್​ ಇತರರಿದ್ದರು. ಡಾ.ಸುಮನ್​ಬಾಯಿ ಸಿಂಧೆ ನಿರೂಪಣೆ ಮಾಡಿದರು. ಡಾ.ಬಾಲಸುಬ್ರಹ್ಮಣ್ಯ ವಂದಿಸಿದರು.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net